ಲಾಕ್ ಡೌನ್ ವೇಳೆ ಸುಧಾರಾಣಿ ಪುತ್ರಿ ಕಾರು ಚಾಲನೆ: ಟ್ರೋಲ್ ಗೊಳಗಾದ ಹಿರಿಯ ನಟಿ

ಶುಕ್ರವಾರ, 3 ಏಪ್ರಿಲ್ 2020 (09:29 IST)
ಬೆಂಗಳೂರು: ಕೊರೋನಾ ತಡೆಯಲು 10 ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಯಾರೂ ಮನೆಯಿಂದ ಹೊರಗೆ ಸುತ್ತಾಡುವಂತಿಲ್ಲ ಎಂದು ಕೇಂದ್ರವೇ ಆದೇಶಿಸಿದೆ. ಆದರೆ ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಪುತ್ರಿ ನಿಧಿ ಕಾರು ಚಲಾಯಿಸಿ ಈಗ ಟ್ರೋಲ್ ಗೊಳಗಾಗಿದ್ದಾಳೆ.


ಪುತ್ರಿ ಕಾರು  ಚಲಾಯಿಸುವ ಫೋಟೋವನ್ನು ಸುಧಾರಾಣಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಕ್ಕೆ ನೆಟ್ಟಿಗರು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿರಬೇಕು ಎನ್ನುವ ನೀವೇ ಮಗಳನ್ನು ಹೀಗೆ ಸುತ್ತಾಡಲು ಬಿಟ್ಟರೆ ಹೇಗೆ ಎಂದು ಟ್ರೋಲ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸುಧಾರಾಣಿ ನಾವು ಸುತ್ತಾಡಲು ಹೋಗಿರಲಿಲ್ಲ. ಮನೆಯಲ್ಲಿ ತರಕಾರಿಗಳು ಖಾಲಿಯಾಗಿತ್ತು. ಹೀಗಾಗಿ ಪುತ್ರಿ ಜತೆ ತರಕಾರಿ ತರಲು ಹೋಗಿದ್ದೆ. ಅವಳಿಗೆ ಲೈಸೆನ್ಸ್ ಕೂಡಾ ಇದೆ. ಹೀಗಾಗಿ ಅವಳು ಕಾರು ಚಲಾಯಿಸುತ್ತಿದ್ದಳು. ನಾನು ದೊಡ್ಡ ಬ್ಯಾಗ್ ಗಳನ್ನು ಹಿಡಿದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ