ರಜನೀಕಾಂತ್ ಸಿನಿಮಾ ದಾಖಲೆಯನ್ನು ಮುರಿದ ಆರ್ ಆರ್ ಆರ್

ಸೋಮವಾರ, 4 ಏಪ್ರಿಲ್ 2022 (10:40 IST)
ಹೈದರಾಬಾದ್: ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿರುವ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಸ್ಟಾರ್ ರಜನೀಕಾಂತ್ ಅವರ 2.0 ಸಿನಿಮಾದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

2.0 ಸಿನಿಮಾ ಒಟ್ಟಾರೆಯಾಗಿ ಮಾಡಿದ್ದ ಗಳಿಕೆಯನ್ನು ಆರ್ ಆರ್ ಆರ್ ಸಿನಿಮಾ ಹತ್ತೇ ದಿನದಲ್ಲಿ ಮುರಿದು ಹಾಕಿದೆ. 2.0 ಸಿನಿಮಾ ಒಟ್ಟಾರೆಯಾಗಿ 800 ಕೋಟಿ ರೂ. ಗಳಿಕೆ ಮಾಡಿತ್ತು.

ಆದರೆ ಈಗ ಆರ್ ಆರ್ ಆರ್ ಸಿನಿಮಾ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ 800 ಕೋಟಿ ರೂ. ಗಳಿಕೆ ಮಾಡಿದ್ದು, ಇನ್ನೂ ಥಿಯೇಟರ್ ನಲ್ಲಿ ಯಶಸ್ವೀ ಪ್ರದರ್ಶನ ತೋರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ