ಐಪಿಎಲ್ 2022: ಸಿಎಸ್ ಕೆಗೆ ಮೂರನೇ ಸೋಲುಣಿಸಿದ ಪಂಜಾಬ್

ಸೋಮವಾರ, 4 ಏಪ್ರಿಲ್ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಕಿಂಗ್ಸ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನೂ 54 ರನ್ ಗಳಿಂದ ಸೋತ ಚೆನ್ನೈ ಸತತ ಮೂರನೇ ಸೋಲು ಕಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಶಿಖರ್ ಧವನ್ 33, ಲಿವಿಂಗ್ ಸ್ಟೋನ್ 60, ಜಿತೇಶ್ ಶರ್ಮಾ 26 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈಗೆ ಬ್ಯಾಟಿಂಗ್ ಸಂಪೂರ್ಣ ಕೈಕೊಟ್ಟಿತು. ಅಗ್ರ ಕ್ರಮಾಂಕದ ಐವರು ಬ್ಯಾಟಿಗರು ವಿಫಲರಾದ ಬಳಿಕ ಕೆಳ ಕ್ರಮಾಂಕದಲ್ಲಿ ಆಲ್ ರೌಂಡರ್ ಶಿವಂ ದುಬೆ 57, ಮಾಜಿ ನಾಯಕ ಧೋನಿ 23 ರನ್ ಗಳಿಸಿದರು. ಅಂತಿಮವಾಗಿ ಚೆನ್ನೈ 18 ಓವರ್ ಗಳಲ್ಲಿ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ 54 ರನ್ ಗಳ ಸೋಲು ಅನುಭವಿಸಿತು. ಇದರೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ್ಕಕೆ ಜಾರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ