ಸ್ಯಾಂಡಲ್ ವುಡ್ ಲಿಂಕ್ : NCB ಸ್ಪೆಷಲ್ ಟೀಂನಿಂದ ಡ್ರಗ್ ಕೇಸ್ ವಿಚಾರಣೆ

ಭಾನುವಾರ, 30 ಆಗಸ್ಟ್ 2020 (19:12 IST)
ರಾಜಧಾನಿ ಬೆಂಗಳೂರಿಗೆ ಎನ್ ಸಿ ಬಿ ಸ್ಪೆಷಲ್ ಟೀಂ ಆಗಮಿಸಿದ್ದು, ತನಿಖೆ ಶುರುಮಾಡಿದೆ.

ಸ್ಯಾಂಡಲ್ ವುಡ್ ಜೊತೆಗೆ ಡ್ರಗ್ ಮಾಫಿಯಾ ಲಿಂಕ್ ಇರುವ ಕುರಿತು ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಹೀಗಾಗಿ ಆರೋಪಿ ಅನಿಕಾ ಹೇಳಿಕೆಯಂತೆ ಎನ್ ಸಿ ಬಿ ತನಿಖೆ ಕೈಗೊಂಡಿದ್ದು, ಮತ್ತೊಂದಿಷ್ಟು ಕುಳಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸೋ ಸಾಧ್ಯತೆ ಇದೆ.

ಆರೋಪಿಗಳ ಕಾಲ್ ಡೀಟೈಲ್ಸ್, ವಾಟ್ಸಪ್ ಸಂದೇಶಗಳನ್ನು ಪರಿಶೀಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ