ಕನ್ನಡ ಹಿರಿಯ ನಟಿಗೆ ಮಗ, ಸೊಸೆಯಿಂದ ಕಿರುಕುಳ ಆರೋಪ
ಹಿರಿಯ ನಟಿ ಶ್ಯಾಮಲಾದೇವಿ ತಮ್ಮ ಮಗ ನಿತಿನ್ ಮತ್ತು ಸೊಸೆ ವಿರುದ್ಧ ಕಿರುಕುಳ ಆರೋಪ ಹೊರಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗ-ಸೊಸೆ ವಿರುದ್ಧ ದೂರು ನೀಡಿದ್ದಾರೆ.
ಮಗ-ಸೊಸೆ ಪ್ರತಿನಿತ್ಯ ಬೈಗುಳ, ಹಿಂಸೆ ನೀಡುತ್ತಿದ್ದರು. ಈಗ ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ಯಾಮಲಾದೇವಿ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ ಪತ್ನಿ. ಗಂಧದ ಗುಡಿ, ಬಂಗಾರದ ಮನುಷ್ಯ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಶ್ಯಾಮಲಾದೇವಿ ನಟಿಸಿದ್ದರು.