ಡಬ್ಬಿಂಗ್ ಧಾರವಾಹಿಗಳನ್ನು ಪ್ರಸಾರ ಮಾಡಲು ಹೊರಟ ಸುವರ್ಣ ಕಲಾವಿದರೆ ಬೆದರಿಕೆ ಕರೆ

ಸೋಮವಾರ, 6 ಏಪ್ರಿಲ್ 2020 (09:31 IST)
ಬೆಂಗಳೂರು:ಕೊರೋನಾ ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ನಡೆಸಲು ಸಾಧ್ಯವಾಗದ ಕಾರಣ ಕನ್ನಡ ಕಿರುತೆರೆ ವಾಹಿನಿಗಳು ಹಳೆಯ ಧಾರವಾಹಿಗಳನ್ನು ಪ್ರಸಾರ ಮಾಡಲು ನಿರ್ಧರಿಸಿವೆ.


ಈ ನಡುವೆ ಸ್ಟಾರ್ ಸುವರ್ಣ ವಾಹಿನಿ ಹಿಂದಿಯ ನಝರ್ ಮತ್ತು ಮಹಾಭಾರತ ಧಾರವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡುವುದಾಗಿ ಘೋಷಿಸಿಕೊಂಡಿತ್ತು. ಆದರೆ ದಿಡೀರ್ ಆಗಿ ಈಗ ಈ ಎರಡೂ ಡಬ್ಬಿಂಗ್ ಧಾರವಾಹಿಗಳನ್ನು ಪ್ರಸಾರ ಮಾಡದೇ ಇರಲು ನಿರ್ಧರಿಸಿದೆ.

ಇದಕ್ಕೆ ಕಾರಣ, ಧಾರವಾಹಿಗೆ ಡಬ್ಬಿಂಗ್ ನಡೆಸಬೇಕಿದ್ದ ಕಲಾವಿದರಿಗೆ, ವಾಹಿನಿಗೆ ಡಬ್ಬಿಂಗ್ ಮಾಡದಂತೆ ಸಾಕಷ್ಟು ಎಚ್ಚರಿಕೆ ಕರೆ ಬಂದಿದೆ ಎನ್ನಲಾಗಿದೆ. ಹೀಗಾಗಿ ವಿವಾದ ಬೇಡವೆಂದು ಸುವರ್ಣ ವಾಹಿನಿ ಡಬ್ಬಿಂಗ್ ಧಾರವಾಹಿಗಳನ್ನು ಪ್ರಸಾರ ಮಾಡದೇ ಇರಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ