ಗೆಲುವು ನಿನ್ನದು...ಖುಷಿ ನನ್ನದು, ಹನುಮಂತು ಗೆಲುವು ಸಂಭ್ರಮಿಸಿದ ಧನರಾಜ್‌

Sampriya

ಬುಧವಾರ, 29 ಜನವರಿ 2025 (15:12 IST)
Photo Courtesy X
ಬಿಗ್‌ಬಾಸ್ ಸೀಸನ್ 11ರಲ್ಲಿ ತಮ್ಮ ಸ್ನೇಹದ ಮೂಲಕವೇ ಪ್ರೇಕ್ಷಕರಿಗೆ ಇಷ್ಟವಾಗಿದ್ದ ಹನುಮಂತು ಹಾಗೂ ಧನರಾಜ್  ಜೋಡಿ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ ಹನುಮಂತು ಟ್ರೋಫಿ ಗೆದ್ದಿದ್ದಾರೆ.

ಬಿಗ್ ಬಾಸ್‌ನಲ್ಲಿದ್ದಾಗ ಅಲ್ಲಿ ಹನುಮಂತ ಮತ್ತು ಧನರಾಜ್ ಸ್ನೇಹ ಹೈಲೆಟ್ ಆಗಿತ್ತು. ಈಗ ಶೋ ಮುಗಿದ ಬಳಿಕ 'ದೋಸ್ತಾ ನೀ ಮಸ್ತಾ' ಅಂತ ಖುಷಿಯಿಂದ ಹನುಮಂತನ ಗೆಲುವನ್ನು ಧನರಾಜ್ ಸಂಭ್ರಮಿಸಿದ್ದಾರೆ.


'ಬಿಗ್ ಬಾಸ್ 11'ರ ಟ್ರೋಫಿ ಹಿಡಿದು ಹನುಮಂತ ಜೊತೆ ಧನರಾಜ್ ಪೋಸ್ ಕೊಟ್ಟಿದ್ದಾರೆ. ದೋಸ್ತಾ ನೀ ಮಸ್ತಾ, ಗೆಲವು ನಿನ್ನದು.. ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ ಎಂದಿದ್ದಾರೆ. 'ಇರು ನೀ ಜೊತೆಗಿರು ಎಂದೆಂದಿಗೂ' ಎಂದು ಧನರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಹನುಮಂತು ಗೆಲುವನ್ನು ದೋಸ್ತ ಧನರಾಜ್ ಅವರು ಸಂಭ್ರಮಿಸಿದ್ದಾರೆ. ಶೋ ಮುಗಿದ ಮೇಲೆಯೂ ಆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ