'ಡಾಲಿ' ಧನಂಜಯ್ ಮೂಸಂಬಿ ಜ್ಯೂಸ್ ಮಾರಿದ್ಯಾಕೆ?

ಗುರುವಾರ, 9 ಆಗಸ್ಟ್ 2018 (07:05 IST)
ಬೆಂಗಳೂರು: ‘ಸದಾ ನಿಮ್ಮೊಂದಿಗೆ’ ಎಂಬ ಸಂಚಿಕೆಯಲ್ಲಿ ಸಿನಿ ತಾರೆಯರು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುಚ ಕೆಲಸ ಮಾಡುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಸೃಜನ್ ಲೋಕೇಶ್ ಬೇಲ್‍ಪೂರಿ, ಪಾನಿಪೂರಿ, ಮಸಾಲ ಪೂರಿ ಮಾರಿ ಒಂದು ಕುಟುಂಬಕ್ಕೆ ಆಸರೆಯಾಗಿದ್ದರು. ಈಗ ಧನಂಜಯ್ ಅವರು ಮೂಸಂಬಿ ಜ್ಯೂಸ್ ಮಾರುವ ಮೂಲಕ ಒಂದು ಕುಟುಂಬಕ್ಕೆ ಆಧಾರವಾಗಿದ್ದಾರೆ.




ದೋಣಿ ಹತ್ತಿ ಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಮನೆಯ ಯಜಮಾನ ರವಿ ಸ್ಟ್ರೋಕ್‌ನಿಂದಾಗಿ ಬಲಗೈ ಸ್ವಾಧೀನ ಕಳೆದುಕೊಂಡಿರುವುದರಿಂದ ತನ್ನ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದರೆ ಅವರ ಇಬ್ಬರು ಹೆಣ್ಣು ಮಕ್ಕಳೇ ಬೆಳಿಗ್ಗೆ ಐದು ಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿಯನ್ನು ನಡೆಸುತ್ತಿದ್ದಾರೆ.ಇದರ ಜೊತೆಗೆ ತಮ್ಮಿಬ್ಬರ ವಿದ್ಯಾಭ್ಯಾಸವನ್ನು  ಮುಂದುವರಿಸುತ್ತಿದ್ದಾರೆ.


ಆದರೆ ಈಗ ಕುಟುಂಬದ ನಿರ್ವಹಣೆಯ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಆ ಮಕ್ಕಳಿಗೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಇಂತಹ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಈ ವಾರದ ಸಂಚಿಕೆಯಲ್ಲಿ ಟಗರು ಖ್ಯಾತಿಯ ಧನಂಜಯ್ ಎನ್ ಆರ್ ಕಾಲೋನಿಯ ಬಸ್ ನಿಲ್ದಾಣದ ಬಳಿಯಲ್ಲಿ ಮೂಸಂಬಿ ಜ್ಯೂಸ್ ಮಾರುತ್ತಾ ರವಿ ಕುಟುಂಬದ ಜತೆಗೆ ಕೈ ಜೋಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ