35 ವರ್ಷದ ವ್ಯಕ್ತಿಯಿಂದ ಗರ್ಭಿಣಿಯಾದ 14 ವರ್ಷದ ಬಾಲಕಿ
ಅಪ್ರಾಪ್ತ ಬಾಲಕಿಯೊಬ್ಬಳನ್ನು ನೆರೆಮನೆಯ ವ್ಯಕ್ತಿಯೊಬ್ಬ ನಿರಂತರ ಅತ್ಯಾಚಾರ ಎಸಗಿದ್ದು, ಬಾಲಕಿ ಈಗ 8 ತಿಂಗಳ ಗರ್ಭಿಣಿಯಾಗಿದ್ದಾಳೆ.
ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಾಗ ಆಸ್ಪತ್ರೆಯಲ್ಲಿ ಬಾಲಕಿ ಗರ್ಭಿಣಿ ಆಗಿರುವ ವಿಷಯ ಪಾಲಕರಿಗೆ ಗೊತ್ತಾಗಿದೆ.
ಏನೇನೋ ನೆಪ ಹೇಳಿಕೊಂಡು ಹಲವು ಬಾರಿ ಕಾಮುಕ ಆರೋಪಿ ಮನೆಗೆ ಬರುತ್ತಿದ್ದ ಎಂದು ಸಂತ್ರಸ್ತೆಯ ಪೋಷಕರು ದೂರಿದ್ದಾರೆ.
ಆರೋಪಿ ವಿರುದ್ಧ ಕೇಸ್ ದಾಖಲಾಗಿದ್ದು, ಬಂಧಿತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.