15 ಅಡಿ ಮಣ್ಣು ಸಮೇತ ಎತ್ತರಕ್ಕೆ ಚಿಮ್ಮಿತು ನೀರು: ಅಚ್ಚರಿ
ಅಚ್ಚರಿಯ ಘಟನೆಯೊಂದು ನಡೆದಿದೆ. ಏಕಾಏಕಿಯಾಗಿ ನೀರು ಮಣ್ಣು ಸಮೇತ 15 ಅಡಿ ಎತ್ತರಕ್ಕೆ ಚಿಮ್ಮಿದೆ.
ಬೋರ್ ವೆಲ್ ಕೊರೆಯುವ ವೇಳ ಇದ್ದಕ್ಕಿದ್ದಂತೆ ಚಿಮ್ಮಿದ ನೀರಿನ ಬುಗ್ಗೆ ಗಮನ ಸೆಳೆದಿದೆ. ಏಕಾಏಕಿ ಮಣ್ಣು ಸಮೇತ ಹದಿನೈದು ಅಡಿ ಎತ್ತರಕ್ಕೆ ಚಿಮ್ಮಿದ ಜೀವಜಲವನ್ನು ಕಂಡು ಅಲ್ಲಿದ್ದ ಜನರು ಖುಷ್ ಆದ್ರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವನಗೊಂಡನ ಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಈರಣ್ಣ ಎಂಬ ರೈತನ ತೋಟದಲ್ಲಿ ಚಿಮ್ಮಿದೆ ನೀರು.
ಚಿಮ್ಮುತ್ತಿರುವ ನೀರನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ ಗ್ರಾಮಸ್ಥರು. ತೋಟದಲ್ಲಿ ಈಗಾಗಲೇ ಕೊರೆಸಿದ್ದ ಹಳೆಯ ಬೋರ್ ವೆಲ್ ಪಕ್ಕದಲ್ಲಿ ಹೊಸ ಬೋರ್ ವೆಲ್ ಕೊರೆಸುವಾಗ ಘಟನೆ ನಡೆದಿದೆ.