ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಎಪ್ರಿಲ್ 27ರಂದು ನಡೆಯಲಿದೆ
ಮಂಗಳವಾರ, 25 ಜನವರಿ 2022 (20:26 IST)
ಧರ್ಮಸ್ಥಳ: ವರದಕ್ಷಿಣೆ ಮತ್ತು ದುಂದುವೆಚ್ಚವನ್ನು ತಡೆಯುವ ನಿಟ್ಟಿನಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವು ಪ್ರತಿವರ್ಷದಂತೆ ಈ ವರ್ಷ ಎಪ್ರಿಲ್ 27ಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 15ರೊಳಗೆ ಮಾಹಿತಿ ಮತ್ತು ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ವರನಿಗೆ ಧೋತಿ , ಶಾಲು ಮತ್ತು ವಧುವಿಗೆ ಸೀರೆ ,ರವಕೆ ಕಣ ಹಾಗೂ ಮಂಗಳಸೂತ್ರ, ಹೂವಿನ ಹಾರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ:08258-266644 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು