ಖರ್ಚಿಗೆ ಕಾಸಿಲ್ಲ ಅಂದರೆ ಕಳ್ಳತನವೆ ಖಯಾಲಿ ಮಾಡಿಕೊಂಡ ಗ್ಯಾಂಗ್ ಒಂದು ರಾಜಾರೋಷವಾಗಿ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮಡಿವಾಳದ ಮಾರುತಿ ನಗರದಲ್ಲಿರುವ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ ನಲ್ಲಿ ಶೆಟರ್ ಬೀಗ ಮುರಿದು 22 ಸಾವಿರ ಹಣ, ಸೇರಿ ಕೆಲವು ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.ಸಿಸಿಟಿವಿ ಡಿವಿಆರ್ ಸಹ ಕಳ್ಳತನ ಮಾಡಿದ್ದಾರೆ ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ನಲ್ಲಿ ಬಂದ ಇಬ್ಬರಿಂದ ಕೃತ್ಯ ನಡೆದಿದೆ.