ತುಮಕೂರು : ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವಿವಾಹಿತರ ನಡುವೆ ಬೆಳೆದಿರುವ ಅನೈತಿಕ ಸಂಬಂಧ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿಯ ದಸೂಡಿ ಗ್ರಾಮದ ಶಿಕ್ಷಕ ರಂಗನಾಥ್ ಹಾಗೂ ಶಿಕ್ಷಕಿ ಲಾವಣ್ಯ ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೆಂಡತಿ ಚಂದ್ರಮ್ಮ ಮನೆಯಲ್ಲಿ ಇಲ್ಲದಿರುವ ವೇಳೆ ಸಹ ಶಿಕ್ಷಕಿಯನ್ನು ಮನೆಗೆ ಕರೆಸಿಕೊಂಡು ಚಕ್ಕಂದವಾಡುತ್ತಿದ್ದ ಶಿಕ್ಷಕನನ್ನು ಹೆಂಡತಿ ರೆಡ್ ಹ್ಯಾಂಡ್ ಆಗಿ ಹಿಡಿದು ಗಲಭೆ ಎಬ್ಬಿಸಿದ್ದಾಳೆ. ಊರ ಜನರ ಮುಂದೆ ಪತಿಯ ಮರ್ಯಾದೆಯನ್ನು ಹರಾಜಿಗೆ ಹಾಕಿದ್ದಾರೆ.