ದರ್ಶನ್ ಕೇಸ್ ನಲ್ಲಿ ಹೀರೋ ಆಗಿದ್ದ ಎಸಿಪಿ ಚಂದನ್, ಪುನೀತ್ ಕೆರೆಹಳ್ಳಿ ಕೇಸ್ ನಲ್ಲಿ ಇದೇನು ಮಾಡಿದ್ರು

Sampriya

ಗುರುವಾರ, 24 ಅಕ್ಟೋಬರ್ 2024 (16:49 IST)
Photo Courtesy X
ಬೆಂಗಳೂರು: ಪುನೀತ್ ಕೆರೆಹಳ್ಳಿ ಅವರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅವಮಾನಿಯವಾಗಿ ನಡೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ಕುಮಾರ್ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ ತನಿಖೆಗೆ ಆದೇಶಿಸಿದೆ.

ಜುಲೈ 26ರಂದು ರಾತ್ರಿ 9ಗಂಟೆ ಸುಮಾರಿಗೆ ಕಾಮನ್‌ ಪೇಟ್‌ ಪೊಲೀಸರು ಕಾರಣ ತಿಳಿಸದೇ ಬಲವಂತವಾಗಿ ನನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ಅವಾಚ್ಯ ಶಬ್ಧಗಳುಇಂದ ನಿಂದಿಸಿದ್ದಾರೆ. ಅದಲ್ಲದೆ ಎಸಿಪಿ ಚಂದನ್ ಕುಮಾರ್‌ ಅವರು ನನಗೆ ಅವಾಚ್ಯ ಶಬ್ಧಗಳಿಂದ ಬೈದು ಲಾಠಿಯಿಂದ ಜೋರಾಗಿ ಹೊಡೆದು, ನಗ್ನಗೊಳಿಸಿ ಲೈಂಗಿಕ ಕಿರುಕುಳ ನೀಡಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಪುನೀತ್ ಕುಮಾರ್ ಅವರು ದೂರಿ, ನ್ಯಾಯ ಒದಗಿಸಿಕೊಡುವಂತೆ ಕೋರಿಕೊಂಡಿದ್ದರು.

ಇದೀಗ ಈ ಸಂಬಂಧ ತನಿಖೆ ನಡೆಸಿ 4ವಾರಗಳಲ್ಲಿ ವರದಿ ಸಲ್ಲಿಸುವಂತೆ ಉಪ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪುನೀತ್ ಕೆರೆಹಳ್ಳಿ ಅವರು, ಎಸಿಪಿ ಚಂದನ್ ವಿರುದ್ಧ ತನಿಖೆಗೆ ಆದೇಶಿಸಿದ ಮಾನವ ಹಕ್ಕು ಆಯೋಗ ಪುನೀತ್ ಕೆರೆಹಳ್ಳಿಯವರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಅವಮಾನಿಯವಾಗಿ ನೆಡೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಎಸಿಪಿ ಚಂದನ್ ವಿರುದ್ಧ ತನಿಖೆಗೆ ಆದೇಶಿಸಿದ ಮಾನವ ಹಕ್ಕು ಆಯೋಗ

ಆದರೆ ಒಬ್ಬ ಎಸಿಪಿ ವಿರುದ್ಧ ಮತ್ತೊಬ್ಬ ಎಸಿಪಿ ಹೇಗೆ ತನಿಖೆ ಮಾಡುತ್ತಾನೆ ಇದರಲ್ಲಿ ತನಿಖೆ ಮಾಡುವ ಅಗತ್ಯ ಏನಿದೆ? ಕೇವಲ ಪ್ರಕರಣ ನೆಡೆದ ದಿನ ಪುನೀತ್ ಕೆರೆಹಳ್ಳಿಯವರನ್ನು ವಿಚಾರಣೆ ನಡೆಸಿದ ಕೊಠಡಿಯ ಸಿಸಿಟಿವಿ ದೃಶ್ಯ ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ. ಒಟ್ಟಿನಲ್ಲಿ ಒಬ್ಬ ಕಾಮುಕ ಎಸಿಪಿಯನ್ನು ರಕ್ಷಿಸಲು ಕಾಂಗ್ರೆಸ್ಸ್ ಸರ್ಕಾರ ಮುಂದಾಗಿದೆ ಅಷ್ಟೇ!

ಇದರಲ್ಲಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ನನಗಿಲ್ಲ ಕಾನೂನು ಸಂವಿಧಾನ ಎಲ್ಲಾವೂ ಅಧಿಕಾರ ಮತ್ತು ಹಣ ಭಲ ಇರುವವರ ಪರ ಇರುತ್ತವೆ ಎನ್ನುವುದೇ ಸತ್ಯ @India_NHRC ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ