ಮೋದಿ, ಅಮಿತ್ ಶಾಗೆ ನನ್ನ ಕಂಡ್ರೆ ಭಯ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಗುರುವಾರ, 29 ಮಾರ್ಚ್ 2018 (13:42 IST)
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮೋದಿ ಎಲ್ಲರು ರಾಜ್ಯದಲ್ಲಿ ಚುನಾವಣೆ ಪ್ರಚಾರ ಮಾಡಲಿ. ಆದರೆ, ಪ್ರಧಾನಿ ಮೋದಿ, ಅಮಿತ್ ಶಾಗೆ ನನ್ನ ಕಂಡ್ರೆ ಭಯ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
 ನನ್ನನ್ನು ಸೋಲಿಸುವುದು ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ , ಅಮಿತ್ ಶಾ ಕೈಲಿ ಸಾಧ್ಯವಿಲ್ಲ. ಚಾಮುಂಡೇಶ್ವರಿ ಜನರ ಮೇಲೆ ನನಗೆ ನಂಬಿಕೆಯಿದೆ ಅವರು ನನ್ನ ಕೈ ಹಿಡಿಯುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿ, ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಖಚಿತ.
2008ರ ಉಪಚುನಾವಣೆಯಲ್ಲೂ ಕೂಡ ಇವರೆಲ್ಲ ಇದ್ದರು ಆಗ ನಾನು ಗೆದ್ದಿಲ್ವಾ ಎಂದು ತಿರುಗೇಟು ನೀಡಿದರು.
 
156 ಮತಗಳಿಂದ ಆಗಲಿ ಒಂದು ಮತದಿಂದಾಗಲಿ ಗೆಲುವು ಗೆಲುವೇ ತಾನೆ. ಧೃವ ಕುಮಾರ್ ಒಂದೇ ಓಟಿನಿಂದ ಗೆದ್ದು ಸಂಸತ್‌ಗೆ ಹೋಗಿಲ್ವಾ ಎಂದರು.
 
ಶಾಸಕ ಮಾಲಿಕಯ್ಯ ಗುತ್ತೇದಾರ್ ಬಿಜೆಪಿ ಸೇರುವ ವಿಚಾರದ ಬಗ್ಗೆ ನಾವು ದೂರವಾಣಿಯಲ್ಲಿ ಚರ್ಚಿಸಿದ್ದೇವೆ. ಅವರ ಸಮಸ್ಯೆಗಳ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಗುತ್ತೇದಾರ್ ಬಿಜೆಪಿ ಸೇರ್ಪಡೆಯಾಗುವ ವರದಿಗಳು ಕೇವಲ ಉಹಾಪೋಹ ಎಂದು ಸ್ಪಷ್ಟಪಡಿಸಿದರು. 
 
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರ ರಾಹುಲ್ ಮತ್ತೆ ರಾಜ್ಯಕ್ಕೆ ಬಂದ ಮೇಲೆ ನಾವು ದೆಹಲಿಗೆ ಹೋಗಿ ತೀರ್ಮಾನ ಮಾಡ್ತಿವಿ. ಎಲ್ಲಾ ಹಾಲಿ ಕೈಶಾಸಕರಿಗೆ ಟಿಕೇಟ್ ನೀಡುವ ವಿಚಾರದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ
 
ಐದು ದಿನಗಳ ಕಾಲ ಮೈಸೂರಿನಲ್ಲಿರುತ್ತೇನೆ ನಾಳೆ ಒಂದು ದಿನ ವಿಶ್ರಾಂತಿ ಪಡೆಯುತ್ತೇನೆ. ಇನ್ನು ನಾಲ್ಕು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದ ಜನರನ್ನ ಸಂಪರ್ಕಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ