ದಂಪತಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಹಾಕಿದ ಅನಾಮಿಕ

ಶುಕ್ರವಾರ, 10 ಜನವರಿ 2020 (06:47 IST)
ಬೆಂಗಳೂರು : ದಂಪತಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಅನಾಮಿಕ ವ್ಯಕ್ತಿಯೊಬ್ಬ ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದ ಘಟನೆ ಬೆಂಗಳೂರಿನ ಬಂಡೆಪಾಳ್ಯದಲ್ಲಿ ನಡೆದಿದೆ.



ಆಗಾಗ ಕರೆ ಮಾಡುತ್ತಿದ್ದ ಆ ಅನಾಮಿಕ ವ್ಯಕ್ತಿ 15 ಲಕ್ಷ ಹಣ ನೀಡಬೇಕು ಇಲ್ಲವಾದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.


ಈ ಬಗ್ಗೆ ಅನುಮಾನಗೊಂಡ ದಂಪತಿ ಬಂಡೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ಶುರುಮಾಡಿದ್ದಾರೆ. ಆ ವ್ಯಕ್ತಿ ಯಾರು? ಆ ವಿಡಿಯೋ ಹೇಗೆ ಸಿಕ್ಕಿದೆ ಎಂಬ ಮಾಹಿತಿ ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ