ಕೆರೆ ಮಾಯವಾಗಿ ಕೆರೆಯ ಜಾಗದಲ್ಲಿ ಸರ್ಕಾರಿ ಕಛೇರಿಗಳ ಉಪಟಳ

ಭಾನುವಾರ, 9 ಅಕ್ಟೋಬರ್ 2022 (19:28 IST)
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿನ 4.15 ಎಕರೆಯ ಪ್ರದೇಶದಲ್ಲಿದ್ದ ಕೆರೆಯೇ ಮಾಯವಾಗಿದೆ, ಕೆರೆಯ ಅಂಗಳದಲ್ಲೆ  ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡ, ಹಾಸ್ಟಲ್ ನಿರ್ಮಾಣವಾಗಿದೆ, ಕೆರೆ ಅಂಗಳದಲ್ಲಿ ಇರುವ ತೋಟಗಾರಿಕಾ ಇಲಾಖೆ, ಸರ್ಕಾರಿ ಬಾಲಕಿಯರ ಹಾಗು ಬಾಲಕರ ಹಾಸ್ಟರ್, ಕನ್ನಡ ಭವನ, ಮದರಸ, ಸರ್ಕಾರಿ ಶಾಲೆಗೆ ಡೆಮಾಲಿಷನ್ ಭೀತಿ ಎದುರಾಗಿದೆ.
 
ಬಂಗಾರಪೇಟೆ ಪುರಸಭೆಯಲ್ಲಿ ನಕಲಿ ಖಾತೆಗಳನ್ನ ಮಾಡಿ ಸರ್ಕಾರಿ ಕೆರೆಯನ್ನೆ ಒತ್ತುವರಿ ಮಾಡಿದ್ದಾರೆಂದು, ಕೆರೆ ಉಳಿಸಲು ಹೋರಾಟ ಮಾಡ್ತಿರುವ ಗಾರೇ ಕೆಲಸ ಮಾಡುವ ವ್ಯಕ್ತಿ ಶ್ರೀಧರ್ ಆರೋಪಿಸಿದ್ದಾರೆ.ಸರ್ವೇ ನಂಬರ್ 137 ರಲ್ಲಿನ 4.15 ಎಕರೆ ವಿಸ್ತೀರ್ಣದ ಪ್ರದೇಶ ಇಂದಿಗೂ ಖರಾಬು ಕೆರೆ ಎಂಬುದು ದಾಖಲೆಯಲ್ಲಿದೆ. ಆದರೆ ಕೆರೆಯನ್ನೆ ಮಾಯ ಮಾಡಲು ಬಂಗಾರಪೇಟೆ ಪುರಸಭೆಯಿಂದಲೇ ಸಂಚು ನಡೆದಿದೆಯಂತೆ, 2014 ರಲ್ಲಿ ನೀರಿದ್ದ ಕೆರೆಯಲ್ಲಿ ಕಟ್ಟಡಗಳ ತ್ಯಾಜ್ಯ ಸುರಿದು ಪುರಸಭೆಯ ಜೆಸಿಬಿ ಯಿಂದಲೇ ಸಮತಟ್ಟು ಮಾಡಿದ್ದಾರಂತೆ, ಇದೀಗ ಕೆರೆ ಉಳಿಸಲು ಬಂಗಾರಪೇಟೆ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಕಚೇರಿಯಲ್ಲು ಶ್ರೀಧರ್ ದೂರು ಸಲ್ಲಿಸಿ ಹೋರಾಟ ಮಾಡ್ತಿದ್ದಾರೆ.
 
ಕೆರೆ ಅಂಗಳದಲ್ಲಿ ಮುಂದಿನ 10 ದಿನಗಳಲ್ಲಿ ಯಾವುದೇ ಕಾಮಗಾರಿ ನಡೆಸದಿರಿ ಎಂದು ಬಂಗಾರಪೇಟೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ 4.15 ಎಕರೆ ಕೆರೆಯಲ್ಲಿ ಉಳಿದ 1 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಜ್ಜಾಗಿದ್ದ ಪುರಸಭೆಗೆ ಹಿನ್ನಡೆಯಾಗಿದೆ. ಆದರೆ ಕೆರೆ ಅಂಗಳದಲ್ಲೆ ಸರ್ಕಾರಿ ಕಚೇರಿ, ಹಾಸ್ಟರ್, ಶಾಲೆ ನಿರ್ಮಾಣ ಮಾಡಿರೊದಾಗಿ ಇತ್ತೀಚೆಗೆ ತಹಶೀಲ್ದಾರ್ ನಡೆಸಿರೊ ಸರ್ವೇಯಲ್ಲು ಬಹಿರಂಗವಾಗಿದೆ. ಕಂದಾಯ ಇಲಾಖೆ ಸ್ವಾಮ್ಯದ ಕೆರೆಯಲ್ಲಿ ಕಚೇರಿಗಳಿಗೆ ಖಾತೆ ಹೇಗೆ ಮಾಡಿದ್ದೀರಾ, ಉತ್ತರಿಸುವಂತೆ  ತಹಶೀಲ್ದಾರ್  ದಯಾನಂದ್  ಪತ್ರ ಬರೆದಿದ್ದಾರೆ  . ಆದರೆ ತಹಶೀಲ್ದಾರ್ ಪತ್ರ ಬರೆದು ವಾರವೇ ಕಳೆದರು  ಬಂಗಾರಪೇಟೆ ಪುರಸಭೆ ಅಧಿಕಾರಿಗಳು ಉತ್ತರ ನೀಡಿಲ್ಲ, ಈ ಬಗ್ಗೆ ಮಾತನಾಡಿರುವ ಶಾಸಕ ನಾರಾಯಣಸ್ವಾಮಿ, ಬಂಗಾರಪೇಟೆಯ ಖರಾಬು ಕೆರೆ ತನ್ನ ಸ್ವರೂಪವನ್ನೆ ಕಳೆದುಕೊಂಡಿದೆ.ಇದು ಪುರಸಭೆ ಆಸ್ತಿ ಎಂತಿದ್ದಾರೆ.
 
ಕೆರೆಯಲ್ಲಿ ಬೇರೆ ಕಟ್ಟಡ ನಿರ್ಮಾಣಕ್ಕೆ ಎದುರಾಗದ ತಕರಾರು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಯಾಕೆಂದು  ದಲಿತ ಮುಖಂಡರು ಪ್ರಶ್ನಿಸಿದ್ದಾರೆ.ಕೆರೆ ಉಳಿಸಿಕೊಟ್ಟು, ಕೆರೆ ಅಂಗಳದಲ್ಲಿನ ಒತ್ತುವರಿ ತೆರವು ಮಾಡುವಂತೆ ದೂರುದಾರ ಶ್ರೀಧರ್ ಆಗ್ರಹಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ