ಪ್ಲೈಟ್ ನಲ್ಲಿ ವೃದ್ದೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಸಾಮಿ ಕೊನೆಗೂ ಅಂದರ್..!

ಶನಿವಾರ, 7 ಜನವರಿ 2023 (18:16 IST)
ನವೆಂಬರ್ 26 ನೇ ತಾರೀಖು.ನ್ಯೂಯಾರ್ಕ್ ನಿಂದ ದೆಹಲಿಗೆ ಏರ್ ಲೈನ್ಸ್ ಪ್ಲೈಟ್ ಹೊರಟಿತ್ತು.ಪ್ಲೈಟ್ 8a ಸೀಟಿನಲ್ಲಿ ಶಂಕರ್‌ಮಿಶ್ರಾ ಎಂಬಾತ ಟ್ರಾವೆಲ್ ಮಾಡ್ತಿದ್ರೆ ಪಕ್ಕದ 9A ಸೀಟಿನಲ್ಲಿ  ವೃದ್ಧೆ ಮಹಿಳೆಯೊಬ್ರು ಪ್ರಯಾಣ ಬೆಳೆಸಿದ್ರು.ಈ ಸಮಯದಲ್ಲೇ ಪಾನಮತ್ತನಾಗಿ ನಿತ್ರಾಣ ಸ್ಥಿತಿಗೆ ಶಂಕರ್ ಶರ್ಮ ತಲುಪಿದ್ದ ಎನ್ನಲಾಗಿದೆ.ಹೀಗಿರುವಾಗ ಪಾನಮತ್ತನಾಗಿ ತೂರಾಡಿಕೊಂಡು ವೃದ್ಧೆ ಸೀಟ್ ಬಳಿ ಬಂದು ಮೂತ್ರ ವಿಸರ್ಜನೆ ಮಾಡಿದ ಆರೋಪ ಮಾಡಲಾಗಿದೆ.ಆಗ ಮೂತ್ರದಿಂದ ವೃದ್ಧೆಯ ಬಟ್ಟೆ, ಶೂ, ಬ್ಯಾಗ್ ಎಲ್ಲವೂ ಒದ್ದೆಯಾಗಿತ್ತು.ಏರ್ ಹೋಸ್ಟೇಸ್ ಕೂಡಾ ಇದನ್ನು ಮುಟ್ಟಲು ನಿರಾಕರಿಸಿದ್ರು.ಬಳಿಕ ಬಾತ್ ರೂಂ ಗೆ ಕರೆದುಕೊಂಡು  ಹೋಗಿ ವೃದ್ದೆಗೆ ಬೇರೆ ಬಟ್ಟೆ ನೀಡಿದ್ರು.ಜೊತೆಗೆ ಏರ್ ಹೋಸ್ಟೇಸ್ ಪ್ರಯಾಣ ಮಾಡುವ ಸೀಟ್ ನೀಡಿದ್ದು,ಎರಡು ಗಂಟೆಗಳ ಕಾಲ ಪ್ರಯಾಣ ಮಾಡಿದ್ರು.ಆದ್ರೆ ಘಟನೆ ಬಳಿಕ‌  ವೃದ್ದೆಯ ಬಳಿ ಕ್ಷಮೆಯಾಚಿಸಿದ್ದ‌.ಇಷ್ಟೆಲ್ಲಾ ಆದ್ರೂ  ಘಟನೆ ಬಗ್ಗೆ ಏರ್ ಇಂಡಿಯಾ ಯಾವುದೇ ಕ್ರಮ‌ಕೈಗೊಳ್ಳಲಿಲ್ಲ..ವಿಮಾನ ಇಳಿದ ಬಳಿಕವೂ ವೃದ್ಧೆಯ ಯಾವುದೇ ಸಹಾಯಕ್ಕೆ ಏರ್ ಇಂಡಿಯಾ ಸಿಬ್ಬಂದಿ ಬರಲಿಲ್ಲ ಎನ್ನಲಾಗಿದೆ.
 ಈ ಬಗ್ಗೆ ಅಸಮಧನಾಗೊಂಡು ತನಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಬರೆದಿಕೊಂಡಿದ್ರು..ಆ ಬಳಿಕ ಇಡೀ ದೇಶಾಧ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.ಆ ಬಳಿಕ ಘಟನೆ ಗಂಭೀರತೆಯನ್ನ ಪಡೆದುಕೊಂಡಿದ್ದು, ದೆಹಲಿ ಪೊಲೀಸ್ರು ಎಫ್ ಐ ಆರ್ ದಾಖಲಿಸಿದ್ರು..ಆದ್ರೆ ಪ್ರಕರಣ ದಾಖಲಾದ ಬೆನ್ನಲ್ಲೇ ಶಂಕರ್ ಮಿಶ್ರಾ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದ.ಒಂದ್ಕಡೆ ಮುಂಬೈ ಹಾಗೂ ಬೆಂಗಳೂರಿನಲ್ಲಿ ಮೂರು ದಿನಗಳಿಂದ‌ ದೆಹಲಿ ಪೊಲೀಸರ ಎರಡು ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ಈ ಮಧ್ಯೆ ಸಿಸಿಬಿ ಪೊಲೀಸ್ರು ನೆನ್ನೆ ರಾತ್ರಿ ಶಂಕರ್ ಮಿಶ್ರಾನನ್ನ ಸಂಜಯನಗರದ ರಾಮ್ ಕಿ ಅಪಾರ್ಟ್ಮೆಂಟ್ ನ ಗೆಸ್ಟ್ ಹೌಸ್ ನಲ್ಲಿ ಅಡಗಿದ್ದವನನ್ನ ವಶಕ್ಕೆ ಪಡೆದಿದ್ದಾರೆ.ಆ ಬಳಿಕ ದೆಹಲಿ ಪೊಲೀಸರ ವಶಕ್ಕೆ ಕೊಟ್ಟಿದ್ದು,ಬಂಧಿಸಿ ದೆಹಲಿಗೆ ಕರೆದೊಯ್ದಿದ್ದಾರೆ‌.
ಇನ್ನು ಆರೋಪಿಗೆ ಸರ್ಜಾಪುರದ ಬಳಿ ಪ್ಲಾಟ್ ಇದ್ರೂ ಅಲ್ಲಿಗೆ ಹೋಗಿರಲಿಲ್ಲ.ಮೊಬೈಲ್ ಸ್ಚಿಚ್ ಆಫ್ ಮಾಡಿಕೊಂಡು ಸ್ನೇಹಿತನ ಸಹಾಯದಿಂದ ಸಂಜಯ್ ನಗರದಲ್ಲಿ ತಲೆಮರೆಸಿಕೊಂಡಿದ್ದ. ಸದ್ಯ ದೆಹಲಿಯ ಪಟಿಯಾಲಹೌಸ್ ಕೋರ್ಟ್ ಗೆ ಆರೋಪಿಯನ್ನ ಹಾಜರುಪಡಿಸಲಾಗಿದೆ.ಮತ್ತೊಂದ್ಕಡೆ ಏರ್ ಇಂಡಿಯಾ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದ್ದಂತೆ ನಾಲ್ವರು ಸಿಬ್ಬಂದಿಗಳನ್ನ ಕೆಲಸಕ್ಕೆ ಬರದಂತೆ ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ