ಮೆಟ್ರೊ ಟಿಕೆಟ್ ದರವೂ ಕ್ಯಾಬ್ ದರವೂ ಈಗ ಒಂದೇ: ಟ್ಯಾಕ್ಸಿನೇ ಬೆಸ್ಟ್ ಅಂತಿದ್ದಾರೆ ಜನ

Krishnaveni K

ಮಂಗಳವಾರ, 11 ಫೆಬ್ರವರಿ 2025 (10:40 IST)
ಬೆಂಗಳೂರು: ನಮ್ಮ ಮೆಟ್ರೊ ಟಿಕೆಟ್ ದರ ಏಕಾಏಕಿ ದುಪ್ಪಟ್ಟು ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೊ ಟಿಕೆಟ್ ದರವೂ ಆಪ್ ಆಧಾರಿತ ಕ್ಯಾಬ್ ದರವೂ ಈಗ ಹೆಚ್ಚು ಕಡಿಮೆ ಸರಿಸಮವಾಗಿದೆ.

ಫೆಬ್ರವರಿ 9 ರಿಂದ ಮೆಟ್ರೊ ಟಿಕೆಟ್ ದರ 2 ರಿಂದ 2.5 ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಈಗ ಜನ ಮೆಟ್ರೊ ಹತ್ತಲೂ ಹಿಂಜರಿಯುವಂತಾಗಿದೆ. ಪ್ರತಿನಿತ್ಯ ಸಂಚರಿಸುವವರು ಪಾಸ್ ಮಾಡಿಸಿಕೊಳ್ಳಬಹುದು. ಆದರೆ ಅಪರೂಪಕ್ಕೆ ಮೆಟ್ರೊ ಹತ್ತುರವವರಿಗೆ ಪಾಸ್ ಮಾಡಿದರೂ ವೇಸ್ಟ್. ಹೀಗಾಗಿ ಟಿಕೆಟ್ ದರ ಹೆಚ್ಚಳ ಬಿಸಿ ತುಪ್ಪವಾಗಿದೆ.

ಮೆಟ್ರೊದಲ್ಲಿ ಈಗ 2-4 ಕಿ.ಮೀ. ದೂರ ಸಂಚರಿಸಬೇಕಾದರೆ ಮಿನಿಮಮ್ 30 ರೂ. ನೀಡಬೇಕು. ಆಪ್ ಆಧಾರಿತ ಕ್ಯಾಬ್ ಗಳಲ್ಲೂ ಹೆಚ್ಚು ಕಡಿಮೆ ಇಷ್ಟೇ ದರವಿದೆ. ಒಂದು ವೇಳೆ ಇಬ್ಬರು 2 ಕಿ.ಮೀ. ಜೊತೆಯಾಗಿ ಹೋಗಬೇಕಾದರೆ ಮೆಟ್ರೊಗಿಂತ ಆಟೋವೇ ಅಗ್ಗವಾಗಿರುತ್ತದೆ.

ಹೀಗಿರುವಾಗ ನಮಗೆ ಮೆಟ್ರೋ ಯಾಕೆ ಬೇಕು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ, ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಮೆಟ್ರೊವನ್ನು ನಗರದಲ್ಲಿ ಪರಿಚಯಿಸಲಾಗಿತ್ತು. ಆದರೆ ಈಗ ಮೆಟ್ರೊ ಇದ್ದೂ ಉಪಯೋಗವಿಲ್ಲದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ