ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್. ಸೋಮವಾರದಿಂದ ಮೆಟ್ರೋ ಸಂಚಾರದಲ್ಲಿ ಈ ಬದಲಾವಣೆಯಾಗಲಿದೆ.
ಪ್ರತೀ ಸೋಮವಾರದಂದು ನಮ್ಮ ಮೆಟ್ರೋ 4.15 ಕ್ಕೇ ಆರಂಭವಾಗಲಿದೆ. ಜನವರಿ 13 ರಿಂದ ಪ್ರತೀ ಸೋಮವಾರ 4.15 ಕ್ಕೆ ಮೆಟ್ರೋ ಆರಂಭವಾಗಲಿದೆ. ಇದು ಊರಿಗೆ ಹೋಗಿ ಬೆಂಗಳೂರಿಗೆ ವಾಪಸಾಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರಿನಲ್ಲಿ ಹಲವರು ತಮ್ಮ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಇವರೆಲ್ಲರೂ ವೀಕೆಂಡ್ ಗಳಲ್ಲಿ ಊರಿಗೆ ಹೋಗಿ ಸೋಮವಾರ ಮರಳುತ್ತಾರೆ. ಆದರೆ ಬೆಳ್ಳಂ ಬೆಳಿಗ್ಗೆ ಮೆಟ್ರೋಗಾಗಿ 5 ಗಂಟೆಯವರೆಗೆ ಕಾಯಬೇಕಾಗುತ್ತಿತ್ತು. ಇದರಿಂದ ನಿಗದಿತ ಸಮಯಕ್ಕೆ ತಮ್ಮ ಗಮ್ಯಕ್ಕೆ ತೆರಳಲು ಕಷ್ಟವಾಗುತ್ತಿತ್ತು.
ಇದೀಗ ಮೆಟ್ರೋ ಸೇವೆ 4.15 ರಿಂದಲೇ ಆರಂಭವಾಗುವ ಕಾರಣ ಊರಿನಿಂದ ಮರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ಕೇವಲ ಸೋಮವಾರಗಳಂದು ಮಾತ್ರ. ಉಳಿದ ದಿನಗಳಂದು ಯಥಾ ಪ್ರಕಾರ 5 ಗಂಟೆಗೇ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಮಾಧ್ಯಮ ಪ್ರಕಟಣೆ ನೀಡಿದೆ.