ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಬಂದೋಬಸ್ತ್ ಗೆ ಬಾರಿ ಪ್ಲಾನ್

ಭಾನುವಾರ, 28 ಆಗಸ್ಟ್ 2022 (20:45 IST)
ಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ ಮೂರು ದಿನವಷ್ಟೆ ಬಾಕಿ ಇದೆ .ಹೀಗಾಗಿ ನಗರದಲ್ಲಿ ಬಂದೋಬಸ್ತ್ ಗೆ ಬಾರಿ ಪ್ಲಾನ್ ನಡೆಯುತ್ತಿದೆ.ಮೂರು ರೀತಿ ಕ್ಯಾಟಗರಿ ಪೊಲೀಸರ ನಿಯೋಜನೆ ಮಾಡಿದ್ದಾರೆ.ಗಣೇಶ ಕೂರಿಸಲು ಮೂರು ರೀತಿ ಪ್ರದೇಶವನ್ನ ಪೊಲೀಸರು ಗುರುತಿಸಿದ್ದಾರೆ.
 
ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಏರಿಯಾಗಳು ಎಂದು ಪೊಲೀಸರು ಗುರುತಿಸಿದಾರೆ.ಪಶ್ಚಿಮ ವಿಭಾಗದಲ್ಲಿ ಚಾಮರಾಜಪೇಟೆ ಹಾಗೂ ಚಂದ್ರಲೇಔಟ್ ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿದ್ದಾರೆ.ಇನ್ನು ಪೂರ್ವ ವಿಭಾಗದಲ್ಲಿ ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿ, ಗೋವಿಂದಪುರ ಸೂಕ್ಷ್ಮ ಪ್ರದೇಶ ಎಂದು ಗುರುತು ಮಾಡಿದ್ದಾರೆ.ಇಂತಹ ಏರಿಯಾಗಳಲ್ಲಿ ಪೊಲೀಸರ ಹದ್ದಿನ ಕಣ್ಣು ಇಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ