ಮನೆಯಲ್ಲಿನ ಟೈಲ್ಸ್ ಮಾದರಿಯಲ್ಲಿ ಟೈಲ್ಸ್ ರಸ್ತೆ ನಿರ್ಮಾಣಕ್ಕೆ ಮುಂದಾದ ಬಿಬಿಎಂಪಿ

ಬುಧವಾರ, 23 ನವೆಂಬರ್ 2022 (14:14 IST)
ಪಾಲಿಕೆಯಿಂದ ಇನ್ಮುಂದೆ ರ್ಯಪೀಡ್ ರೋಡ್ ಹೊಸ ಯೋಜನೆ ಜಾರಿಗೆ ಬರಲಿದೆ.ಮನೆಗೆ ಹಾಕೋ ಟೈಲ್ಸ್ ಮಾದರಿಯಲ್ಲಿ ರಸ್ತೆ ನಿರ್ಮಾಣವಾಗಲಿದೆ.ಮೂರನೇ ಹಂತದ ವೈಟ್ ಟ್ಯಾಪಿಂಗ್ ರಸ್ತೆ ಬದಲು ಟೈಲ್ಸ್ ಹಾಕಿ ರಸ್ತೆ ನಿರ್ಮಾಣ ಕ್ಕೆ ಬಿಬಿಎಂಪಿ ಮುಂದಾಗಿದೆ.ಭಾರತದಲ್ಲೇ ಪ್ರಪ್ರಥಮ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಹೊಸ ಯೋಜನೆ  ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
 
500 ಮೀಟರ್ ಕೇವಲ ಮೂರು ದಿನಗಳಿ ಕಾಮಗಾರಿ ಕಂಪ್ಲೀಟ್ ಆಗಲಿದೆ.ಮನೆಯಲ್ಲಿನ ಟೈಲ್ಸ್ ಮಾದರಿಯಲ್ಲಿ ಟೈಲ್ಸ್ ರಸ್ತೆ  ನಿರ್ಮಾಣ ಮಾಡುವ ಹೊಸ ಯೋಜನೆ ಬಿಬಿಎಂಪಿ ತರಲಿದೆ.ಸದ್ಯ ಇಂದಿನಿಂದ ಒಲ್ಡ್ ಮದ್ರಾಸ್ ರೋಡ್ ನಲ್ಲಿ  ಕಾಮಗಾರಿ ಪ್ರಾರಂಭವಾಗಿದ್ದು,ಸುಮಾರು 30 ವರ್ಷಕಿಂತ ಹೆಚ್ಚು ಉಪಯೋಗಕ್ಕರ ಗುಣಮಟ್ಟದ ರಸ್ತೆ ಬರುವಂತೆ ಪಾಲಿಕೆ ಯೋಜನೆ ಇದ್ದಾಗಿದೆ.ಈ ಕಾಮಗಾರಿಯಿಂದ ತಿಂಗಳ ಗಟ್ಟಲೆ ವಾಹನ ಸವಾರರಿಗೆ ಕಿರಿಕಿರಿ ಇಲ್ಲ.ವೈಟ್ ಟ್ಯಾಪಿಂಗ್ ಅಗೋ ವೆಚ್ವವೇ ಟೈಲ್ಸ್ ಗೆ ಅಗುತ್ತೆ.ಮೊದಲ ಹಂತದಲ್ಲಿ ಇಂದಿರನಗರದಲ್ಲಿ ಅಳವಡಿಕೆ ಮಾಡಲಾಗುತ್ತೆ.ನಂತರ ದಿನಗಳಲ್ಲಿ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಕಾಮಗಾರಿ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ