ಬೆಂಗಳೂರಿನ ಫ್ಲೈ ಓವರ್ ಗಳ ನಿರ್ವಹಣೆ ಮರೆತ್ರಾ ಬಿಬಿಎಂಪಿ ಅಧಿಕಾರಿಗಳು

ಮಂಗಳವಾರ, 22 ನವೆಂಬರ್ 2022 (13:36 IST)
ಬಿಬಿಎಂಪಿ ನಿರ್ಲಕ್ಷ್ಯ ಒಂದಾ ಎರಡಾ ? ನಗರದಲ್ಲಿರುವ  ಫ್ಲೈಓವರ್ ಗಳ ನಿರ್ವಹಣೆ ಮಾಡದೇ ಬಿಬಿಎಂಪಿ ನಿರ್ಲಕ್ಷ್ಯ ಮಾಡ್ತಿದೆ.ಹೀಗೆ ಸರಿಯಾಗಿ ನಿರ್ವಹಣೆ ಮಾಡದೇ ಫ್ಲೈಓವರ್ ಮೇಲೆದ್ದು ಬಂದ ಬೋಲ್ಟ್ .ಬೋಲ್ಟ್ ಚುಚ್ಚಿ ಹಲವು ವಾಹನಗಳು ಪಂಚರ್ ಆಗಿದೆ.
 
ಕೆ.ಆರ್.ಮಾರ್ಕೆಟ್ ನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್  ಬಾಲಗಂಗಾಧರನಾಥ ಸ್ವಾಮಿ ಫ್ಲೈ ಓವರ್ ನಲ್ಲಿ ಬೋಲ್ಟ್ ಮೇಲೆ ಬಂದು ಸಮಸ್ಯೆಯಾಗ್ತಿದೆ.ಬೆಳಗ್ಗೆಯಿಂದ ಬಸ್, ಲಾರಿಗಳ ಟೈರ್ ಪಂಚರ್ ಆಗ್ತಿದ್ದು, ಸುಮಾರು 8 ವಾಹನಗಳ ಟೈರ್ ಪಂಚರ್ ಆಗಿ ಚಾಲಕರು ಪರದಾಡುವಂತಾಗಿದೆ.ಸರಿಯಾಗಿ ಫ್ಲೈ ಓವರ್ ನಿರ್ವಹಣೆ ಮಾಡದ ಪಾಲಿಕೆ ವಿರುದ್ಧ ಚಾಲಕರ ಕಿಡಿಕಾರಿದ್ದಾರೆ.
 
ಅಲ್ಲದೇ ವೇಗವಾಗಿ ಬಂದ ವಾಹನ ಪಲ್ಟಿ ಆದ್ರೆ ಯಾರು ಹೊಣೆ ಅಂತಾ ಚಾಲಕರು ಪ್ರಶ್ನೆ ಮಾಡ್ತಿದ್ದಾರೆ.ಸದ್ಯ ಬೋಲ್ಟ್ ಎದ್ದ ಜಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ತೆರಳಿದ್ದಾರೆ.ಇದರಿಂದಾಗಿ ಫ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಸಂಭವಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ