ಯಡಿಯೂರಪ್ಪರನ್ನು ಹಾಡಿ ಹೊಗಳಿದ ಬಿ.ಸಿ.ಪಾಟೀಲ

ಬುಧವಾರ, 27 ಮೇ 2020 (22:41 IST)
ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಸಚಿವ ಬಿ.ಸಿ.ಪಾಟೀಲ್ ಹಾಡಿ ಹೊಗಳಿದ್ದಾರೆ.

ಲಾಕ್ ಡೌನ್ ನಂಥ ಕಷ್ಟ ಕಾಲದಲ್ಲಿ ಮೆಕ್ಕೆಜೋಳ ಬೆಳೆದ 5 ಲಕ್ಷ ರೈತರಿಗೆ  ತಲಾ 5 ಸಾವಿರ ರೂಪಾಯಿ ನೀಡುವ ಕೆಲಸವನ್ನು ದೇಶದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾಡಿದ್ದಾರೆ.  5 ನೂರು ಕೋಟಿ ರೂಪಾಯಿ ನೀಡುವ ಕೆಲಸವನ್ನು  ಮಾಡಿರುವುದು ಸಾಮಾನ್ಯವಲ್ಲ. ಕೃಷಿ ಇಲಾಖೆಯಿಂದ ಗೈಡ್ ಲೈನ್ ಜಾರಿಗೆ ಮಾಡಿದ್ದು,  ಕಳೆದ  ವರ್ಷ ಮೆಕ್ಕೆ ಜೋಳ ಬೆಳೆದ  ಪ್ರತಿಯೊಬ್ಬ ರೈತನಿಗೆ 5 ಸಾವಿರ ರೂಪಾಯಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಕೆಲಸ ಶೀಘ್ರದಲ್ಲಿ ನಡೆಯಲಿದೆ ಎಂದು ಕೃಷಿ ಸಚಿವ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

ಕಳೆದ ವರ್ಷ ಬೆಳೆ ಸಮೀಕ್ಷೆ ಮಾಡಲಾಗಿದೆ. ಆ ಆಧಾರದ ಮೇಲೆ ರೈತರಿಗೆ ಮೆಕ್ಕೆ ಜೋಳದ ಪರಿಹಾರ ನೀಡಲಾಗುತ್ತದೆ. ರೈತರು  ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆಯ ಬೆಳೆ ಭತ್ತ ಬೆಳೆದಿರುವುದು ಅದು ಸೋನಾ ಮಸಾರಿ ಭತ್ತ. ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಇದೆ. ಸರ್ಕಾರ ತೆರೆದಿರುವ ಖರೀದಿ ಕೇಂದ್ರದಲ್ಲಿ ಈ ಸೋನಾ ಮಸಾರಿ ಭತ್ತವನ್ನು ರೈತರು ಮಾರಾಟ ಮಾಡುವುದಿಲ್ಲ.  ರೈತರು ನೀಡಿದರೆ ಖಂಡಿತಾ ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡುತ್ತದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ