ಸಿಟಿ ರವಿಯನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದ್ದು ಈ ಕಾರಣಕ್ಕಂತೆ

Krishnaveni K

ಮಂಗಳವಾರ, 24 ಡಿಸೆಂಬರ್ 2024 (11:06 IST)
ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಂಧಿಸಿದ ಬಳಿಕ ಪೊಲೀಸರು ರಾತ್ರಿಯಿಡೀ ಶಾಸಕ ಸಿಟಿ ರವಿಯನ್ನು ಸುತ್ತಾಡಿಸಿದ್ದು ಯಾಕೆ ಎಂಬ ಕಾರಣ ಈಗ ಬಯಲಾಗಿದೆ.

ಸಿಟಿ ರವಿಯನ್ನು ರಾತ್ರಿಯಿಡೀ ಸುತ್ತಾಡಿಸಿದ್ದಕ್ಕೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸ್ಪಷ್ಟನೆ ನೀಡಿದ್ದಾರೆ. ಮೊದಲು ಸಿಟಿ ರವಿಯವರನ್ನು ಹಿರೇಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಾರೆ. ಆದರೆ ಹೀರೇಬಾಗೇವಾಡಿಯಲ್ಲ ಅಪಾರ ಜನಸ್ತೋಮವಿದ್ದಿದ್ದರಿಂದ ಭದ್ರತಾ ದೃಷ್ಟಿಯಿಂದ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.

ಆದರೆ ಖಾನಾಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು ಸೇರಿ ಗೊಂದಲದ ವಾತಾವರಣ ಉಂಟಾಯಿತು. ಅಲ್ಲದೆ ಬಿಜೆಪಿ ಕಾರ್ಯಕರ್ತರು ಹೆಚ್ಚು ಸಂಖ್ಯೆಯಲ್ಲಿ ಜಮಾವಣೆಗೊಳ್ಳುತ್ತಿದ್ದುದ್ದರಿಂದ ಪರಿಸ್ಥಿತಿ ಕೈತಪ್ಪಿ ಹೋಗುತ್ತಿತ್ತು.

ಹೀಗಾಗಿ ಸಿಟಿ ರವಿಯವರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮದುರ್ಗಕ್ಕೆ ಸ್ಥಳಾಂತರಿಸಲಾಯಿತು.  ಅಲ್ಲೆಲ್ಲವೂ ಮಾಧ್ಯಮಗಳು, ಕಾರ್ಯಕರ್ತರು ಸೇರಿ ಅವರಿಂದ ತಪ್ಪಿಸಿಕೊಳ್ಳಲು ಬೆಂಗಾವಲು ಪಡೆಯು ಪ್ರಯತ್ನಿಸುತ್ತದೆ. ಈ ನಡುವೆ ಸಿಟಿ ರವಿಯವರಿಗೆ ಆಹಾರ, ಚಿಕಿತ್ಸೆ ನೀಡಲಾಗಿತ್ತು.  ಮರುದಿನ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಯಡಾ ಮಾರ್ಟಿನ್ ಸ್ಪಷ್ಟನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ