ಜನರಕ್ಷಾ ಯಾತ್ರೆ ಬೆಂಬಲಿಸಿ ಬಿಜೆಪಿ ಪಾದಯಾತ್ರೆ: ಸಿಪಿಎಂ ಕಚೇರಿ ಮುತ್ತಿಗೆಗೆ ಯತ್ನ
ಬೆಂಗಳೂರು: ಬಿಜೆಪಿ ಕೇರಳದಲ್ಲಿ ನಡೆಸುತ್ತಿರುವ ಜನರಕ್ಷಾ ಯಾತ್ರೆ ಬೆಂಬಲಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಬಸವನಗುಡಿಯಲ್ಲಿರುವ ಸಿಪಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಬಿಎಸ್ ವೈ, ಮಾಜಿ ಡಿಸಿಎಂ ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪಾದಯಾತ್ರೆಯಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿ, ದುಷ್ಕರ್ಮಿಗಳಿಂದ ಹತ್ಯೆಯಾದ ಆರ್ ಎಸ್ಎಸ್ ಕಾರ್ಯಕರ್ತರ ದೃಶ್ಯ ಬಿತ್ತರಿಸಲಾಯಿತು.