ಬಿಎಸ್ ವೈ, ಅನಂತ ಕುಮಾರ್ ವಿರುದ್ಧ ಎಫ್ ಐಆರ್ ಬಲೆ ಹಣಿಯಲು ಸಿಎಂ ಸಭೆ
ಫೆ.12 ರಂದು ನಡೆದ ಕಾರ್ಯಕ್ರಮದಲ್ಲಿ ಬಿಎಸ್ ವೈ-ಅನಂತ ಕುಮಾರ್ ಅಕ್ಕಪಕ್ಕ ಕುಳಿತುಕೊಂಡು ಕಪ್ಪದ ಬಗ್ಗೆ ಮಾತನಾಡುತ್ತಿದ್ದುದು, ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆಗ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿರುವ ವಿಚಾರದಲ್ಲಿ ಬಿಜೆಪಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದರು. ಆದರೆ ಈ ವಿಡಿಯೋ ಕಾಂಗ್ರೆಸ್ ಗೆ ಸಿಕ್ಕ ಬಹುದೊಡ್ಡ ಅಸ್ತ್ರವಾಗಿತ್ತು.