ಬೆಂಗಳೂರು: ಕೇವಲ ಮೂಡ ಹಗರಣದ ಕಡತಗಳು ಸಚಿವ ಬೈರತಿ ಸುರೇಶ್ ಅವರು ಹೆಲಿಕಾಪ್ಟರ್ ನಲ್ಲಿ ಹೊತ್ತು ತಂದಿದ್ದಾರೆಂಬ ಸರ್ವರೂ ಮಾತನಾಡುವ ವಿಷಯವನ್ನು ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ ಯವರು ಹೇಳಿದ ಮಾತ್ರಕ್ಕೆ, ಮಾಜಿ ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪ ನವರ ಶ್ರೀಮತಿಯವರಾದ ದಿ. ಮೈತ್ರಾದೇವಿ ಯವರ ನಿಧನದಲ್ಲಿ ಶೋಭಾ ಕರಂದ್ಲಾಜೆ ಯವರ ಕೈವಾಡ ಇದೆ ಎಂಬ ಅವಹೇಳನ ಮತ್ತು ಮಾನಹಾನಿ ಹೇಳಿಕೆ ನೀಡಿರುವ ಬೈರತಿ ಸುರೇಶ್ ರವರು ಸ್ತ್ರೀ ನಿಂದಕ ಹಾಗೂ ಹೊಲಸು ಅಭಿವೃಚಿಯ ನೀಚ ರಾಜಕಾರಣಿಯಾಗಿದ್ದಾರೆ.
ಸುರೇಶ್ ಅವರ ಹೇಳಿಕೆ ಮಾನಹಾನಿಕರವಾಗಿದ್ದು ಇಂತಹ ವ್ಯಕ್ತಿಗಳು ಸಚಿವ ಸ್ಥಾನದಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂಬುದನ್ನು ಬೈರತಿ ಸುರೇಶ್ ಅವರು ಸಾಭೀತು ಪಡಿಸಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಸಹ ಎತ್ತಿಹಿಡಿದಿದೆ. ಈ ರೀತಿ ಬೇಜವಾಬ್ದಾರಿ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಿದಂತಾಗಿದೆ. ಇಂತಹ ಹೇಳಿಕೆಗಳನ್ನು ಎಲ್ಲಾ ಜನರೂ ಖಂಡಿಸಬೇಕು.
ದಿ.ಮೈತ್ರಾದೇವಿ ನಮ್ಮನ್ನು ಅಗಲಿದಾಗ ರಾಜಕೀಯದಲ್ಲೇ ಇಲ್ಲಿದ ವ್ಯಕ್ತಿ, ರಾಜಕೀಯ ಹೇಳಿಕೆ ನೀಡಿದ ಕಾರಣ ಮಹಿಳೆಯರ ಗುಣನಡತೆ ಕುರಿತು ಆರೋಪ ಮಾಡುವುದು ಇವರಿಗೆ ಅಧಿಕಾರದ ಮಧ ತಲೆಗತ್ತಿ ಇಂತಹಾ ಅಟ್ಟಹಾಸ ಮೆರೆದಿದ್ದಾರೆ ಎನಿಸುತ್ತಿದೆ. ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ಮಹಿಳೆಯರು ನಿಮ್ಮ ತಪ್ಪುಗಳನ್ನು ತೋರಿಸುವುದು ಅಪರಾಧವೇ? ಹಾಗೆ ಹೇಳಿಕೆ ಕೊಟ್ಟು ಆಗ್ರಹಿಸಿದರೆ ಅವರ ಗುಣನಡತೆಯ ಕುರಿತು ಮಾತನಾಡುವುದು ಎಷ್ಟು ಸರಿ ಎಂದೂ ಅವರು ಪ್ರಶ್ನಿಸಿದ್ದಾರೆ.