ಪ್ರಜ್ವಲ್ ರೇವಣ್ಣ ಪತ್ತೆಗೆ 196 ರಾಷ್ಟ್ರಗಳಿಗೆ ಬ್ಲೂ ಕಾರ್ನರ್ ನೋಟಿಸ್ ರವಾನೆ

Sampriya

ಮಂಗಳವಾರ, 7 ಮೇ 2024 (20:12 IST)
ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನಕ್ಕೆ ಈಗಾಗಲೇ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ್ದು ಅದನ್ನು196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದರ ಅನುಸಾರ ಪ್ರಜ್ವಲ್ ರೇವಣ್ಣ ಯಾವುದೇ ವಿಮಾನ ನಿಲ್ದಾಣ, ಬಂದರು, ಗಡಿಯಲ್ಲಿ ಕಾಣಿಸಿಕೊಂಡರೆ ಮಾಹಿತಿ ನೀಡಲಾಗುವುದು ಎಂದು ಇಂಟರ್ಫೋಲ್ ನಿಂದ ಎಸ್ ಐಟಿಗೆ ನಿನ್ನೆ ಸಂಜೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಬ್ಲೂ ನೋಟಿಸ್ ಅನ್ನು  ಅಪರಾಧಿಕ ಕೃತ್ಯಗಳ ತನಿಖಾ ತಂಡಕ್ಕೆ ನೆರವಾಗಲು ಯಾವುದೇ ಒಬ್ಬ ವ್ಯಕ್ತಿಯ ಕುರಿತಾಗಿ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲು, ಆತನ ಗುರುತು, ಆತ ಇರುವ ನಿಖರ ಸ್ಥಳ ಹಾಗೂ ಆತನ ಚಟುವಟಿಕೆಗಳನ್ನು ಗಮನಿಸಿ ಪತ್ತೆ ಹಚ್ಚಲು ಈ ನೋಟಿಸ್ ಅನ್ನು ಜಾರಿ ಮಾಡಲಾಗುತ್ತದೆ. ಸದ್ಯ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದೇ ನೋಟಿಸ್ ಜಾರಿಯಾಗಿದೆ.

ಬ್ಲೂ ಕಾರ್ನರ್ ನೋಟಿಸ್ ಮೂಲಕ ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ, ಅವರು ಏನು ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಇಂಟರ್ ಫೋಲ್ ನಿಂದ ಎಸ್ ಐಟಿಗೆ ಲಭ್ಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ