ಬೇಡವೆಂದರೂ ಸಮುದ್ರಕ್ಕಿಳಿದು ಅಲೆಯ ರಭಸಕ್ಕೆ ಪಂಚೆ ಜಾರಿಸಿಕೊಂಡ ಬೈಂದೂರು ಶಾಸಕ

ಗುರುವಾರ, 11 ಅಕ್ಟೋಬರ್ 2018 (13:21 IST)
ಬೈಂದೂರು : ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಸೋಮವಾರ ಮಹಾಲಯ ಅಮಾವಾಸ್ಯೆ ದಿನದಂದು ಸಮುದ್ರಕ್ಕಿಳಿದು ಮುಜುಗರಕ್ಕೀಡಾದ ಘಟನೆಯೊಂದು ನಡೆದಿದೆ.


ಸೋಮವಾರ ಮಹಾಲಯ ಅಮಾವಾಸ್ಯೆ ದಿನದಂದು  ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ಜೊತೆಗಿದ್ದವರು ಬೇಡ ಎಂದು ಹೇಳಿದರೂ  ಕೇಳದೆ  ಪುಣ್ಯಸ್ನಾನಕ್ಕೆಂದು ಸಮುದ್ರಕ್ಕಿಳಿದ್ದಾರೆ. ಸಮುದ್ರಕ್ಕಿಳಿದ ಶಾಸಕರಿಗೆ ಅಲೆಯ ರಭಸ ತಾಳಲಾರದೆ  ಅವರು ಅಲ್ಲಿಯೇ ಕುಸಿದು  ಬಿದ್ದಿದ್ದಾರೆ. ಅಲ್ಲದೇ ಅವರು  ಧರಿಸಿದ್ದ ಪಂಚೆ ಕೂಡ ಜಾರಿ ಬಿದ್ದಿದೆ.


ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ವೀಕ್ಷಕರು ಗಹಗಹಿಸಿ ನಕ್ಕಿದ್ದಾರೆ. ಇದರಿಂದ ಶಾಸಕರು ಮುಜುಗರಕ್ಕೀಡಾಗುವಂತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ