ಮೋದಿಯ ಸೈನ್ಯವನ್ನು ಸೋಲಿಸಲು ಐಎನ್‌ಡಿಐಎ ಕೂಟಕ್ಕೆ ಸಾಧ್ಯನಾ...?

geetha

ಗುರುವಾರ, 8 ಫೆಬ್ರವರಿ 2024 (20:36 IST)
ನವದೆಹಲಿ-ಮೋದಿ ಎಂಬ ಚಾಣಕ್ಯನನ್ನು ಸೋಲಿಸಿದರೇ ಮಾತ್ರ, ಬಿಜೆಪಿಯನ್ನು ಸೋಲಿಸಲು ಸಾಧ್ಯ.. ಈ ಸತ್ಯ ಸ್ವತಃ ಇಂಡಿಯಾ ಒಕ್ಕೂಟದ ನಾಯಕರಿಗೂ ಗೊತ್ತಿದೆ.ಹಾಗೇಂದ ಮಾತ್ರಕ್ಕೆ ಎಲ್ಲವೂ ಮೋದಿಯ ಪರವಾಗಿಯೇ ಆಗಿ ಬಿಡುತ್ತೆ ಅನ್ನೋದು ಸುಳ್ಳು. ಯಾಕಂದ್ರೆ ಎಲೆಕ್ಷನ್‌ಗೆ ಏನಿಲ್ಲ ಅಂದರೂ ಇನ್ನೂ ಮೂರು ತಿಂಗಳು ಬಾಕಿ ಇದೆ. ಅಷ್ಟರಲ್ಲಿ ಏನೇನು ಬದಲಾವಣೆ ಬೇಕಾದರೂ ರಾಜಕಾರಣದಲ್ಲಿ ಆಗಿಬಿಡಬಹುದು. ಅರ್ಥಾತ್ ಎನ್‌ಡಿಎ ಒಕ್ಕೂಟದಲ್ಲಿ ಸದ್ಯಕ್ಕೆ ಮೋದಿ ಅಂಡ್ ಟೀಂಮ್‌ಗೆ ಪ್ರಚಂಡ ಗೆಲುವಿನ ವಿಶ್ವಾಸವಂತೂ ಖಂಡಿತಾ ಇದ್ದೇ ಇದೆ. ಈ ಕ್ಷಣಕ್ಕೆ ದೇಶದಲ್ಲಿ ಲೋಕಸಭಾ ಎಲೆಕ್ಷನ್ ಎದುರಾದರೆ ಮೋದಿಯೇ ಗೆಲ್ತಾರೆ ಅನ್ನೋದು ಸಮೀಕ್ಷೆಗಳ ಲೆಕ್ಕಾಚಾರ. ಟ್ರೆಂಡ್ ಕೂಡ ಹಾಗೇ ಇದೆ.

ಕಾಂಗ್ರೆಸ್ ಪಂಚರಾಜ್ಯಗಳ ಎಲೆಕ್ಷನ್ ಬಳಿಕ ಬಿಜೆಪಿಯ ಎದುರು ಅಕ್ಷರಶಃ ಸೋತಿದೆ ಎನ್ನಬಹುದು. ಯಾಕೋ ಕರುನಾಡು, ಹಿಮಾಚಲ ಮತ್ತು ತೆಲಂಗಾಣವನ್ನು ಗೆದ್ದಿದ್ದು ಬಿಟ್ಟರೇ, ಕಾಂಗ್ರೆಸ್ ಬಿಜೆಪಿಗೆ ಸೆಡ್ಡು ಹೊಡೆದು ನಿಲ್ಲುತ್ತೆ ಅನ್ನುವ ಯಾವುದೇ ಆಶಾವಾದ ಕಣ್ಣ ಮುಂದೇ ಬರ್ತಾ ಇಲ್ಲ.ಪಂಚರಾಜ್ಯದಲ್ಲಿ ಕಾಂಗ್ರೆಸ್ ಸೋಲು ಇಡೀ ಇಂಡಿಯಾಕೂಟದ ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಟ್ಟಿದೆ.ನಿತೀಶ್ ಕುಮಾರ್ ಎನ್‌ಡಿಎ ತೆಕ್ಕೆಗೆ ಹೋದ ಬಳಿಕ ಬಿಜೆಪಿ ಮತ್ತೆ ಶಕ್ತಿಕೇಂದ್ರದಲ್ಲಿ ಅಧಿಕಾರವನ್ನು ಹಿಡಿಯೋದು ಬಹುತೇಕ ಕನ್ಪರ್ಮ್ ಆಗ್ತಿದೆ.ಮಮತಾ ಬ್ಯಾನರ್ಜಿ ಹಾಗೂ ನಿತೀಶ್ ಕುಮಾರ ನಂತರ ಈಗ ಮತ್ತೊಂದು ಪಕ್ಷ ಮೈತ್ರಿಕೂಟದಿಂದ ದೂರವಾಗುತ್ತಿದೆ ಎನ್ನಲಾಗ್ತಿದೆ.

ಬಿಹಾರದಲ್ಲಿ ನಿತೀಶ್‌ಕುಮಾರ್ ಆರ್‌ಜೆಡಿಗೆ ಚೆಂಬು ಕೊಟ್ಟು, ಬಿಜೆಪಿ ನೇತೃತ್ವದ ಎನ್‌ಡಿಎ ಸಖ್ಯ ಬೆಳೆಸಿದ ಬಳಿಕ ಇಂಡಿಯಾ ಮೈತ್ರಿ ಕೋಟೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿ ಆಗ್ತಾ ಇದೆ.ಬಿಹಾರದ ರಾಜಕೀಯ ಕ್ಷಿಪ್ರ ಬೆಳವಣಿಗೆಯ ಬಳಿಕ, ಇತ್ತಾ ಬಂಗಾಳದ ದೀದಿಯೂ ಕೂಡ ಚಕಾರ ಎತ್ತಿದ್ದಾರೆ. ಬಹುತೇಕ ಐಎನ್‌ಡಿಐಎ ಕೂಟವನ್ನು ತೊರೆಯಲು ಅಕ್ಷರಶಃ ಸಿದ್ಧತೆ ನಡೆಸಿದ್ದಾರೆ.. ಅದೇ ಹಾದಿಯಲ್ಲಿ ಇದೀಗ ಯುಪಿಯಲ್ಲೂ ಕೂಡ ಆರ್‌ಎಲ್‌ಡಿ ಪಾರ್ಟಿ ದೂರ ಸರಿಯುವ ಸಾಧ್ಯತೆ ಹೆಚ್ಚಾಗಿದೆ.

ಇಂಡಿಯಾ ಮೈತ್ರಿಕೂಟದಿಂದ ಆರ್‌ಎಲ್‌ಡಿ ಪಕ್ಷ ದೂರ ಸರಿಯುವ ಸಾಧ್ಯತೆ ಬಹುತೇಕ ನಿಕಿ ಎನ್ನಲಾಗ್ತಿದೆ... ಕಳೆದ ವಾರವಷ್ಟೇ ಅಖಿಲೇಶ್ ಯಾದವ್ ಕೂಡ ಕಾಂಗ್ರೆಸ್‌ಗೆ ಸಕ್ಕಾತ್ತಾಗಿಯೇ ಟಾಂಗ್ ಕೊಟ್ಟಿದ್ದರು.ಹೀಗೆ ಈ ಎಲ್ಲ ವಿದ್ಯಮಾನಗಳನ್ನು ನೋಡಿದಾಗ ಕಾಂಗ್ರೆಸ್ ನೇತೃತ್ವದ ಒಕ್ಕೂಟದಲ್ಲಿ ಏನೇನು ಸರಿಯಿಲ್ಲ, ಇದರ ವ್ಯಾಲಿಡಿಟಿ ಅದಷ್ಟು ಬೇಗಾ ಮುಕ್ತಾಯವಾಲಿದೆ ಅನ್ನೊದು ಗೊತ್ತಾಗ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ