ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರೌಂಡ್ಸ್

ಸೋಮವಾರ, 12 ಜೂನ್ 2023 (16:44 IST)
ನಗರದಲ್ಲಿ ಅಪರಾಧ ತಡೆಗೆ ನಗರ ಪೊಲೀಸ್ ಆಯುಕ್ತ ದಯಾನಂದ ಮುಂದಾಗಿದ್ದು,ಹೊಯ್ಸಳ ವಾಹನದಲ್ಲಿ ಸಿಟಿ ರೌಂಡ್ಸ್ ನಗರ ಪೊಲೀಸ್ ಆಯುಕ್ತರು ಮಾಡಿದ್ದಾರೆ.
 
ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡಿದ್ದು,ಹೊಯ್ಸಳ ವಾಹನದಲ್ಲಿ ಕುಳಿತು 112 ಕರೆ  ಪೊಲೀಸ್ ಆಯುಕ್ತ ದಯಾನಂದ ಸ್ವೀಕರಿಸಿದ್ದಾರೆ.112 ತುರ್ತು ಸಹಾಯ ವಾಣಿ ಯಾವ ರೀತಿ ಕೆಲಸ ಮಾಡುತ್ತೇವೆ.ಎಷ್ಟು ನಿಮಿಷದಲ್ಲಿ ಕರೆ ಸ್ವೀಕರಿಸಿದ ನಂತರ ಸ್ಥಳಕ್ಕೆ ತೆರಳಿ ಸ್ಥಳಕ್ಕೆ ಸಮಸ್ಯೆ ಬಗೆಹರಿಸುತ್ತಾರೆ ಎಂದು ವಿಕೇಂಡ್ ನಲ್ಲಿ‌ ಸಂಜೆ 4 ಗಂಟೆಯಿಂದ 8  ತನಕ ಹೊಯ್ಸಳ ವಾಹನದಲ್ಲಿ ಸಂಚಾರಿಸಿ ಸಮಸ್ಯ ಕಮಿಷನರ್ ಆಲಿಸಿದ್ರು.
 
ಹೊಯ್ಸಳ ವಾಹನದಲ್ಲಿ ಮಳೆಗಾಲ ಹಿನ್ನಲೆ ಹಗ್ಗ, ವುಡ್ ಕಟಿಂಗ್ ,ಮತ್ತಿತರ ವಸ್ತುಗಳು ಇಟ್ಟಿಕೊಳ್ಳುವಂತೆ ಸೂಚನೆ  ನೀಡಿದ್ರು.ಹೆಚ್ವುವರಿ ಪೊಲೀಸ್ ಆಯುಕ್ತರು, ಡಿಸಿಪಿ ಗಳಿಗೆ ವಾರಕ್ಕೆ ಒಮ್ಮೆ ಹೊಯ್ಸಳ ವಾಹನದಲ್ಲಿ ರೌಂಡ್ಸ್ ಹೋಗುವಂತೆ ಸೂಚನೆ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ