ಒಟ್ಟಿಗೆ ಊಟ ಮಾಡಿದ್ರೂ ಅವರೆಕಾಳು ಹೆಕ್ಕುವ ವ್ಯಕ್ತಿ ಸಿಎಂ: ಎಚ್.ಎಂ.ರೇವಣ್ಣ

ಗುರುವಾರ, 17 ಆಗಸ್ಟ್ 2017 (16:02 IST)
ಒಟ್ಟಿಗೆ ಊಟ ಮಾಡಿದ್ರೂ ಅವರೆಕಾಳು ಹೆಕ್ಕುವ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ನಾನು ಸಚಿವನಾಗುವ ನಿರೀಕ್ಷೆಯಿದೆ. ಆದರೆ, ಸಿಎಂ ಸಿದ್ದರಾಮಯ್ಯ ಇನ್ನೂ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌ಗೆ ಸಲ್ಲಿಸಿದ ನೂತನ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿರುವ ನಿರೀಕ್ಷೆಯಿದೆ. ಆದರೆ, ಖಚಿತವಾಗಿಲ್ಲ ಎಂದರು. 
 
ಸಚಿವ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿಯಿದ್ದು ಖಾಲಿಯಾಗಿರುವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಅಂತಿಮ ನಿಶಾನೆ ತೋರಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ