ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಸಿಎಂ ಸಿದ್ದರಾಮಯ್ಯ ಹೊಸ ಟ್ವೀಟ್

Krishnaveni K

ಗುರುವಾರ, 18 ಜುಲೈ 2024 (11:30 IST)
ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ವಿವಾದಕ್ಕೀಡಾಗುತ್ತಿದ್ದಂತೇ ಡಿಲೀಟ್ ಮಾಡಿದ್ದರು. ಇದೀಗ ಹೊಸ ಟ್ವೀಟ್ ಮಾಡಿದ್ದಾರೆ.

ಸೋಮವಾರವಷ್ಟೇ ರಾಜ್ಯ ಸರ್ಕಾರ ಕನ್ನಡಿಗರಿಗೆ ಮೀಸಲಾತಿ ವಿಚಾರದಲ್ಲಿ ಹೊಸ ವಿಧೇಯಕ ಪಾಸ್ ಮಾಡಿತ್ತು. ಅದರಂತೆ ನಿರ್ವಹಣಾ ವಿಭಾಗದಲ್ಲಿ ಶೇ.50 ರಷ್ಟು ಮತ್ತು ಇತರೆ ವಲಯದಲ್ಲಿ ಶೇ.75 ರಷ್ಟು ಉದ್ಯೋಗ ಕನ್ನಡಿಗರಿಗೆ ಮೀಸಲಾಗಿರಬೇಕು ಎಂದು ನಿಯಮ ಹೊರತರಲಾಗಿತ್ತು.

ಈ ಬಗ್ಗೆ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕನ್ನಡಿಗರಿಗೆ ಶೇ.100 ರಷ್ಟು ಉದ್ಯೋಗ ಮೀಸಲಾತಿ ಎಂದಿದ್ದರು. ಸಿಎಂ ಟ್ವೀಟ್ ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಉದ್ಯಮಿಗಳೂ ಸರ್ಕಾರದ ನೀತಿ ವಿರುದ್ಧ ಸಿಡಿದೆದ್ದಿದ್ದರು. ಇದರ ಬೆನ್ನಲ್ಲೇ ಟ್ವೀಟ್ ಡಿಲೀಟ್ ಮಾಡಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

ಇದೀಗ ಹೊಸದಾಗಿ ಸಿಎಂ ಟ್ವೀಟ್ ಮಾಡಿದ್ದು ನಿರ್ವಹಣಾ ವಿಭಾಗದಲ್ಲಿ ಶೇ.50 ಮೀಸಲಾತಿ ಮತ್ತು ನಿರ್ವಹಣೇತರ ವಿಭಾಗದಲ್ಲಿ ಶೇ.75 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ ಎಂದು ಹೊಸದಾಗಿ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ