ಕಾಂಗ್ರೆಸ್‌ ಜಗಳ ಬಿಟ್ಟರೆ ಇವತ್ತು ಏನೇನಿಲ್ಲ..!

geetha

ಶುಕ್ರವಾರ, 23 ಫೆಬ್ರವರಿ 2024 (18:43 IST)
ಬೆಂಗಳೂರು : ಬಿಜೆಪಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದರೆ, ಕಾಂಗ್ರೆಸ್‌ ನವರಿಗೆ ಅನುದಾನಕ್ಕೆ ಮನವಿ ಸಲ್ಲಿಸುವುದೂ ಸಹ ಬರುವುದಿಲ್ಲ. ವಿನಂತಿಯ ಧೋರಣೆ ಬಿಟ್ಟು ಉದ್ದಟತನದಿಂದ ಪತ್ರ ಬರೆದಿರುವುದು ಸರಿಯಲ್ಲ ಎಂದು ಬಿಜೆಪಿಯವರು ತಗಾದೆ ಹೂಡಿದರು.ತೆರಿಗೆ ಹಂಚಿಕೆ ಹಾಗೂ ಅನುದಾನ ವಿತರಣೆಯಲ್ಲಿ ಕೇಂದ್ರ ಸರ್ಕಾರದ ನಿಲುವುಗಳು ಸೋಮವಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಶಾಸಕರ ನಡುವಿನ ತೀವ್ರ ಜಟಾಪಟಿಗೆ ಕಾರಣವಾಯಿತು.

ಬಿಜೆಪಿ ಶಾಸಕರು ಏನಿಲ್ಲ ಏನಿಲ್ಲ ಎಂದು ಹಾಡುತ್ತಾ ಸದನದ ಬಾವಿಯೊಳಗಿಳಿದು ಪ್ರತಿಭಟಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಯು.ಟಿ ಖಾದರ್‌ ನಿಮಗೆಲ್ಲಾ ಒಂದು ದಿನ ಪ್ರತಿಭಾ ಪ್ರದರ್ಶನ ಏರ್ಪಡಿಸುವುದಾಗಿ ಕಾಲೆಳೆದರು. ಗೊಂದಲದ ಸನ್ನಿವೇಶದಿಂದಾಗಿ ಅಧಿವೇಶನ ಸೋಮವಾರಕ್ಕೆ ಮುಂದೂಡಲ್ಪಟ್ಟಿತು. 

ಹಲವು ವಿಧೇಯಕಗಳನ್ನು ಅಂಗೀಕರಿಸುವ ಉದ್ದೇಶದಿಂದ ಪ್ರತಿಭಟನೆ ನಿಲ್ಲಿಸುವಂತೆ ಹಲವು ಬಾರಿ ಯು.ಟಿ. ಖಾದರ್‌ ಮನವಿ ಮಾಡಿಕೊಂಡರೂ ಬಿಜೆಪಿ ಶಾಸಕರು ಕಿವಿಗೊಡಲಿಲ್ಲ. ಎರಡೂ ಪಕ್ಷದವರು ಕೆಲಕಾಲ ಕಾಂಗ್ರೆಸ್‌ ಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಎಂದು ಸತತವಾಗಿ ಕೂಗಾಟದಲ್ಲಿ ತೊಡಗಿದ್ದ ಕಾರಣ ಸಭೆಯಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಕೊನೆಗೆ, ಸಭಾಪತಿ ಯು.ಟಿ. ಖಾದರ್‌ ಸದನವನ್ನು ಸೋಮವಾರಕ್ಕೆ ಮುಂದೂಡಿದರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ