ಕೊರೊನಾ ಕಿಟ್ ಖರೀದಿ ಅವ್ಯವಹಾರ ಆರೋಪ : ಬಿ.ಶ್ರೀರಾಮುಲು ಹೇಳಿದ್ದೇನು?
ಕೊರೊನಾ ಕಿಟ್ ಸೇರಿದಂತೆ ಇತರೆ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪಕ್ಕೆ ಆರೋಗ್ಯ ಸಚಿವ ಕಿಡಿಕಾರಿದ್ದಾರೆ.
ಕೊರೋನಾ ಕಿಟ್‌ಗಳ ಖರೀದಿಯಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರವಾಗಿದ್ದರೆ ಎಂತಹುದೇ ತನಿಖೆಗೆ ನಾನು ಮತ್ತು ನಮ್ಮ ಸರ್ಕಾರ ಸಿದ್ಧವಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕೊರೊನಾ ನಿಯಂತ್ರಣಕ್ಕೆ ಯಾವುದೇ ಸಹಕಾರ ನೀಡಿಲ್ಲ.
ಆದ್ದರಿಂದ ಈ ರೀತಿಯ ಆರೋಪ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸರ್ಕಾರದ ಜೊತೆ ಕೈ ಜೋಡಿಸಲಿ ಎಂದರು.