ರಾಜ್ಯದಲ್ಲಿ ತುಘಲಕ್‌ ಸರ್ಕಾರ ನಡೆಯುತ್ತಿದೆ ಎಂದ ಸಿ.ಟಿ.ರವಿ

geetha

ಶುಕ್ರವಾರ, 23 ಫೆಬ್ರವರಿ 2024 (20:00 IST)
ಬೆಂಗಳೂರು :ರಾಮನಗರದಲ್ಲಿ ಎಸ್‌ಡಿಪಿಐ ವಕೀಲನೊಬ್ಬ ಗ್ಯಾನವ್ಯಾಪಿ ಮಸೀದಿಯ ಕುರಿತು ನ್ಯಾಯಾಂಗ ನಿಂದನೆ ನಡೆಸಿರುವುದು ಮತ್ತು ಹೊಸಪೇಟೆಯಲ್ಲಿ ರಾಮಭಕ್ತರಿಗೆ ಜೀವ ಬೆದರಿಕೆ ಹಾಕಿರುವ ಘಟನೆಗಳು ಏಕಾಏಕಿ ನಡೆದಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ. 
 
ಈ ಹಿಂದೆ ಕಾಂಗ್ರೆಸ್‌ ಮುಖಂಡ ಬಿ.ಕೆ. ಹರಿಪ್ರಸಾದ್‌ ಗೋದ್ರಾ‌ ಮಾದರಿಯ ಹತ್ಯಾಕಾಂಡ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು. ಈಗ ನಡೆದಿರುವ ಘಟನೆ ಕಾಕತಾಳೀಯವಲ್ಲ. ಹೊಸಪೇಟೆಯಲ್ಲಿ ಬಂಧಿತನಾಗಿರುವ ವ್ಯಕ್ತಿಯೊಡನೆ ಬಿ.ಕೆ. ಹರಿಪ್ರಸಾದ್‌ ರನ್ನೂ ತನಿಖೆಗೊಳಪಡಿಸಬೇಕೆಂದು.  ಘಟನೆಯನ್ನು ಲಘುವಾಗಿ ಪರಿಗಣಿಸಬಾರದು ಎಂದು  ಸಿ.ಟಿ. ರವಿ ಒತ್ತಾಯಿಸಿದರು. 

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಗುರುವಾರ ಮತಾಂಧ ವ್ಯಕ್ತಿಯೊಬ್ಬ ಅಯೋಧ್ಯೆಯಿಂದ ಹಿಂದಿರುಗಿ ಬರುತ್ತಿದ್ದ ರಾಮಭಕ್ತರಿಗೆ ಗೋದ್ರಾ ಮಾದರಿಯ ಹತ್ಯಾಕಾಂಡ ನಡೆಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಈತನನ್ನು ರಾಮಭಕ್ತರೇ ಹಿಡಿದು ಕೊಟ್ಟರೂ ತಪ್ಪಿಸಿಕೊಳ್ಳಲು ಅವಕಾಶ ನೀಡಿ, ಬಳಿಕ ನಮ್ಮ ಪ್ರತಿಭಟನೆಗೆ ಮಣಿದು ಬಂಧಿಸಲಾಗಿದೆ. ರಾಜ್ಯದಲ್ಲಿ ತುಘಲಕ್‌ ಸರ್ಕಾರ ನಡೆಯುತ್ತಿದೆ ಎಂದು ಸಿ.ಟಿ. ರವಿ ಹೇಳಿದರು. ಶುಕ್ರವಾರ ನಗರದ ಖಾಸಗಿ ಹೋಟೆಲ್‌ ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ  ಅವರು ಮಾತನಾಡಿದರು. 

ತಿಕ್ಕಲು ಮುಸ್ಲಿಂ ದೊರೆ ತುಘಲಕ್‌ ದರ್ಬಾರ್‌ ನಿಂದ ಪ್ರೇರೇಪಣೆ ಪಡೆದಂತೆ ಕಾಣುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ, ನಾಡಗೀತೆಯ ವಿಷಯದಲ್ಲಿ, ಕುವೆಂಪು ಘೋಷವಾಕ್ಯದಲ್ಲಿ ಹಾಗೂ ಮತ್ತಿತರ ಧಾರ್ಮಿಕ ವಿಷಯಗಳಲ್ಲಿ ಘಳಿಗೆಗೊಂದು ಸುತ್ತೋಲೆ ಹೊರಡಿಸುತ್ತಿದೆ ಎಂದು ಅವರು ಆರೋಪಿಸಿದರು. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ