ಜೂನ್ 4 ರವರೆಗೆ ಡೇಂಜರ್

ಗುರುವಾರ, 28 ಮೇ 2020 (20:54 IST)
ಹವಾಮಾನ ವೈಪರೀತ್ಯದಿಂದಾಗಿ ಮೇ 31 ರಿಂದ ಜೂನ್ 4 ರವರೆಗೆ ಅಪಾಯ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ದಕ್ಷಿಣಭಾಗ ಮತ್ತು ಪೂರ್ವ ಮಧ್ಯಭಾಗದ ವ್ಯಾಪ್ತಿಯಲ್ಲಿ ಮೇ 31 ರಿಂದ ಜೂನ್ 4 ರವರೆಗೆ ವಾಯಭಾರ ಕುಸಿತದ ಕಾರಣ ಸಮುದ್ರದಲ್ಲಿ ಭಾರಿ ಅಲೆಗಳ ಅಬ್ಬರ ಜಾಸ್ತಿಯಾಗಲಿದೆ ಎಂದು ಭಾರತ ಸರ್ಕಾರದ ಮೆಟಿಯಾರೊಜಿಕಲ್ ಡಿಪಾರ್ಟಮೆಂಟ್ ಹವಾಮಾನ ಕೇಂದ್ರ ತಿರುವನಂತಪುರ ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮೇ 31 ರಿಂದ ಜೂನ 4 ರ ವರೆಗೆ ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆ ತೆರಳಬಾರದು. ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಲ್ಲಿ ಈ ಕೂಡಲೇ ವಾಪಸ್ಸು ಸುರಕ್ಷಿತ ಬಂದರು ಪ್ರದೇಶಗಳಿಗೆ ವಾಪಸ್ಸಾಗಬೇಕೆಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ