ರಾಜಧಾನಿಯಲ್ಲಿ ಡೇಂಜರಸ್ ಡೆಂಘಿ ನರ್ತನ

ಬುಧವಾರ, 26 ಜುಲೈ 2023 (17:29 IST)
ಸಿಲಿಕಾನ್ ಸಿಟಿಯಲ್ಲಿ ಡೇಂಜರಸ್ ಡೆಂಘಿ ಪ್ರಕರಣ ಹೆಚ್ಚಾಗ್ತ ಇದೆ. ಮಳೆ ಬರುತ್ತಿರುವದರಿಂದ ಕೊಳಚೆ ಪ್ರದೇಶ, ನಿಂತ ಚರಂಡಿ ನೀರಿನಿಂದಾಗಿ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಜನವರಿಯಿಂದ ಈವರೆಗೆ ಬೆಂಗಳೂರಿನಲ್ಲಿ 2,062 ಡೆಂಘಿ ಪ್ರಕರಣ ಕಂಡು ಬಂದಿದೆ. ಇನ್ನು ಡೆಂಘೀ ರ್ಯಾಪಿಡ್ ಟೆಸ್ಟ್ ಕಿಟ್ ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಈ ಹಿನ್ನೆಲೆ ಇಂಟೆನ್ಸ್ ಸರ್ವೆಲೆನ್ಸ್ ಮಾಡೋಕೆ ಪಾಲಿಕೆ ಮುಂದಾಗಿದೆ.

ಮಳೆಯಿಂದ ಪ್ರತಿದಿನ 50ಕ್ಕೂ ಹೆಚ್ಚು ಡೆಂಘಿ ಕೇಸ್ ಪತ್ತೆಯಾಗುತ್ತಿದ್ದು, ಆರೋಗ್ಯ ಇಲಾಖೆಗೆ ಹೊಸ ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಒಟ್ಟು 4,139 ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ನಗರದಲ್ಲಿ ಹೆಚ್ಚಾಗಿ ಕೊಳಚೆ ಪ್ರದೇಶಗಳನ್ನು ಗುರುತಿಸಿ ಇಂಟೆನ್ಸ್ ಸರ್ವೆಲೆನ್ಸ್ ಮಾಡೋಕೆ ಪಾಲಿಕೆ ಮುಂದಾಗಿದೆ. ಡೆಂಘಿ ಜ್ವರಕ್ಕೆ ತುತ್ತಾಗಿರೋ ವ್ಯಕ್ತಿಯ ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ ಇರೋ ಪ್ರದೇಶಗಳಲ್ಲಿ ಸರ್ವೆಲೆನ್ಸ್ ಮಾಡುತ್ತಿದೆ. ಇನ್ನೂ ನಾಳೆ 11 ಗಂಟೆಗೆ ಆರೋಗ್ಯ ಇಲಾಖೆ ಜೊತೆಗೆ ಸಭೆ ಮಾಡೋಕೆ ಪಾಲಿಕೆ ಸಜ್ಜಾಗಿದೆ.
 
ಇನ್ನೂ ಯಾವ ಜಿಲ್ಲೆಗಳಲ್ಲಿ ಎಷ್ಟು ಕೇಸ್ ಎಂದು ನೋಡೋದಾದ್ರೆ
ಬೆಂಗಳೂರಿನಲ್ಲಿ 2,062, 
ಮೈಸೂರಿನಲ್ಲಿ 280, 
ವಿಜಯಪುರದಲ್ಲಿ 134, 
ಶಿವಮೊಗ್ಗದಲ್ಲಿ 120, 
ಬೆಳಗಾವಿ-112, 
ಚಿತ್ರದುರ್ಗ-104, 
ಧಾರವಾಡದಲ್ಲಿ 99 

ಇನ್ನೂ ಡೆಂಘಿ ಜ್ವರ ಟೆಸ್ಟ್ ಮಾಡೋಕೆ ರ್ಯಾಪಿಡ್ ಟೆಸ್ಟ್ ಕಿಟ್ ಗಳು ಲಭ್ಯವಿದ್ದು, ಈ ಹಿನ್ನೆಲೆ ಮನೆಯಲ್ಲಿ ಟೆಸ್ಟ್ ಅಥವಾ ಲ್ಯಾಬ್ ಗಳಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಜನ ಔಷದಿ ಪಡೀತಾ ಇರೋದ್ರಿಂದ ಡೆಂಘಿ ಪ್ರಕರಣಗಳ ಸರಿಯಾದ ಸಂಖ್ಯೆ ಪತ್ತೆ ಹಚ್ಚೋಕೆ ಪಾಲಿಕೆಗೆ ಅಡ್ಡಿಯಾಗುತ್ತಿದೆ. ಹಾಗೆ ವಾರ್ಡ್ ವಾರ್ಡ್ ಔಷದ ಸಿಂಪಡಿಸೋದಕ್ಕೆ ಬಿಬಿಎಂಪಿ ತಯಾರಿ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ