ಬೆಂಗಳೂರಿನಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರ ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ನಲ್ಲಿ ಅಮಾಯಕರು ಮರುಪರಿಶೀಲನೆ ಮಾಡಿ,ಅವರನ್ನು ಬಿಟ್ಟು ಬಿಡಬೇಕು ಅಂತ ತನ್ವಿರ್ ಶೇಟ್ ಪತ್ರ ಬರೆದಿದೆ.ಡಿಜೆ ಹಳ್ಳಿ ಕೆಜಿ ಹಳ್ಳಿ ಇಡೀ ರಾಷ್ಟ್ರವೇ ಗಮನಿಸಿದೆ.ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಹಾಕಿದ್ರು .ಅದು ಆವತ್ತಿನ ದೊಡ್ಡ ಘಟನೆ.ಈ ಘಟನೆಯಲ್ಲಿ ಕಾಂಗ್ರೆಸ್ ಲೀಡರ್ಸೇ ಇದ್ರು.ಅಂದಿನ ನಮ್ಮ ಸರ್ಕಾರ ಗುರುತಿಸಿ ಅವರು ವಿರುದ್ಧ ಕೇಸ್ ದಾಖಲಿಸಿ ಅರೇಸ್ಟ್ ಮಾಡಲಾಗಿತ್ತು.ಈಗ ಕೆಲವರು ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ.ಬೊಮ್ಮಾಯಿ ಅವರು ಹೇಳ್ತಾರೆ.ನನಗೂ ಆವಾಗ ಕೆಲವರನ್ನು ಬಿಟ್ಟು ಬಿಡಿ ಅಂತ ಒತ್ತಡ ಇತ್ತು ಅಂತಾರೆ.ಬೆಂಕಿ ಹಾಕಿದವರು ಅಮಾಯಕರು ಆದ್ರೆ..?ಪತ್ರ ಬರೆದವರು ಅಮಾಯಕರಾ..?ದಲಿತ ನಾಯಕನ ಮನೆ ಮೇಲೆ ಬೆಂಕಿ ಹಾಕಿದ್ರಿ.ಅವರು ಹೇಳಿದಂತೆ ಏನಾದರೂ ಗೃಹ ಸಚಿವರು ಕೇಳಿದ್ರೆ ಪಾಪ ಮಾಡಿದಂತೆ ಆಗುತ್ತೆ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.