ಡಿಕೆಶಿ ಬಂಧನದ ಬಗ್ಗೆ ಕೇಳಬೇಡಿ ಎಂದು ಮಾಧ್ಯಮದವರಿಗೆ ಕೈಮುಗಿದ ಡಿಸಿಎಂ. ಕಾರಣವೇನು ಗೊತ್ತಾ?
ಗುರುವಾರ, 5 ಸೆಪ್ಟಂಬರ್ 2019 (12:42 IST)
ಬಾಗಲಕೋಟೆ : ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನದ ವಿಚಾರವಾಗಿ ಯಾವುದೇ ಪ್ರಶ್ನೆ ಕೇಳಬೇಡಿ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಧ್ಯಮದವರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ.
ಮಾಧ್ಯಮದವರು ಡಿ.ಕೆ ಶಿವಕುಮಾರ್ ಬಂಧನದ ಕುರಿತು ಡಿಸಿಎಂ ಗೋವಿಂದ ಕಾರಜೋಳ ಪ್ರಶ್ನಿಸಿದಾಗ, ‘ನಾನು ಹೇಳುವುದೇ ಒಂದಾದರೆ, ನೀವು ಮಾಧ್ಯಮದಲ್ಲಿ ಬಿಂಬಿಸುವುದೇ ಬೇರೆ ಆಗಿರುತ್ತದೆ. ಆದ್ದರಿಂದ ಕ್ಷಮಿಸಿ ಅದರ ಬಗ್ಗೆ ನನ್ನನ್ನು ಏನೂ ಕೇಳಬೇಡಿ. ಕಾನೂನು ಪ್ರಕಾರ ಏನು ಆಗುತ್ತೋ ಅದೇ ಆಗುತ್ತದೆ’ ಎಂದು ಕೈಮುಗಿದ್ದಾರೆ.
ಅಲ್ಲದೇ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಾಗುತ್ತಿರುವ ತಾರತಮ್ಯದ ಬಗ್ಗೆ ಮಾತನಾಡಿದ ಅವರು, ‘ಎಲ್ಲ ಶಾಸಕರನ್ನು ಕರೆದು ಸಭೆ ಮಾಡಿ ಸೂಚನೆ ಕೊಟ್ಟಿದ್ದೇನೆ. ಯಾವುದೇ ತಾರತಮ್ಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ಸೂಚನೆ ಕೊಟ್ಟಿದ್ದೇನೆ ‘ ಎಂದು ಅವರು ಹೇಳಿದ್ದಾರೆ.