ದೇವೇಗೌಡ, ಕುಮಾರಸ್ವಾಮಿಗೆ ಚಪ್ಪಲಿ ಹಾಕಿ ಅವಮಾನ: ಜೆಡಿಎಸ್ ದೂರು
ಈ ವೇಳೆ ಅಕ್ರೋಶ ಹೊರಹಾಕಿದ ಪ್ರತಿಭಟನಕಾರರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಭಾವಚಿತ್ರಕ್ಕೆ ಚಪ್ಪಲಿ, ಪೊರಕೆ ಹಾಕಿ ಅಕ್ರೋಶ ಹೊರಹಾಕಿದ್ದರು.
ಪ್ರತಿಭಟನೆ ವೇಳೆ ದೇವೇಗೌಡರಿಗೆ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಗೌರವ ತೋರಲಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ನಾಯಕರು ಇದೀಗ ಠಾಣೆ ಮೆಟ್ಟಿಲೇರಿದ್ದಾರೆ. ನಗರದ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.