ಧರ್ಮಸ್ಥಳ ಕೇಸ್: 9 ನೇ ಪಾಯಿಂಟ್ ನಲ್ಲಿ ಹೂತ ಬಾಲಕಿ ಬಗ್ಗೆ ದೂರುದಾರನ ವಿವರಣೆ ಹೇಗಿತ್ತು

Sampriya

ಶನಿವಾರ, 2 ಆಗಸ್ಟ್ 2025 (16:10 IST)
ಬೆಳ್ತಂಗಡಿ: ಧರ್ಮಸ್ಥಳದ ಸುತ್ತಾಮುತ್ತಾ ಹಲವು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಗುರುತಿಸಿದ 9ನೇ ಪಾಯಿಂಟ್‌ನಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. 

ದೂರುದಾರ ನೀಡಿದ ದೂರಿನಲ್ಲಿ 9ನೇ ಪಾಯಿಂಟ್‌ ತುಂಬಾನೇ ಮಹತ್ವದ್ದು ಆಗಿತ್ತು. 9ನೇ ಪಾಯಿಂಟ್‌ನಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಹೂತಿದ್ದೆ. ಹೂಳುವಾಗ ಬಾಲಕಿಯ ಒಳಉಡುಪು ಇರಲಿಲ್ಲ. ಅದಲ್ಲದೆ ಬ್ಯಾಗ್‌ ಸಮೇತ ಹೂಳಲಾಗಿತ್ತು ಎಂದು ದೂರುದಾರ ಹೇಳಿದ್ದೆ. 

ಇದೀಗ ಮಹತ್ವದ 9ನೇ ಪಾಯಿಂಟ್‌ನಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ನಾಲ್ಕು ಅಡಿ ಮಣ್ಣನ್ನು ಕಾರ್ಮಿಕರು ಅಗೆದಿದ್ದು, ಆ ಬಳಿಕ  ಮಿನಿ ಜೆಸಿಬಿ ನೆರವಿನಿಂದ ಮಣ್ಣನ್ನು ತೆಗೆಯಲಾಯಿತು. 

ಇದೀಗ 9ನೇ ಪಾಯಿಂಟ್‌ನಲ್ಲಿ ಉತ್ಖನನ ಸಂಪೂರ್ಣ ಆಗಿದೆ ಎಂದು ತಿಳಿದುಬಂದಿದೆ. 10ನೇ ಪಾಯಿಂಟ್‌ನಲ್ಲಿ ಉತ್ಖನನ ಶುರುವಾಗಲಿದೆ ಎಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ