ಧರ್ಮಸ್ಥಳ ಕೇಸ್ ಗೆ ಇಂದು ಮಹತ್ವದ ತಿರುವು ಗ್ಯಾರಂಟಿ

Krishnaveni K

ಶನಿವಾರ, 2 ಆಗಸ್ಟ್ 2025 (13:39 IST)
ಮಂಗಳೂರು: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಅವಶೇಷಗಳಿಗಾಗಿ ಹುಡುಕಾಟ ನಡೆಸುತ್ತಿರುವ ಪ್ರಕರಣಕ್ಕೆ ಇಂದು ಮಹತ್ವದ ತಿರುವು ಸಿಗಲಿದೆ ಎನ್ನಲಾಗುತ್ತಿದೆ.

ನಿನ್ನೆಯವರೆಗೆ ಎಂಟನೇ ಪಾಯಿಂಟ್ ವರೆಗೆ ಶೋಧ ಕಾರ್ಯ ನಡೆದಿತ್ತು. ನಿನ್ನೆ ಏಳು ಮತ್ತು ಎಂಟನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆದಿತ್ತು. ಆದರೆ ನಿನ್ನೆ ಒಂದು ಕರವಸ್ತ್ರ ಬಿಟ್ಟು ಬೇರೇನೂ ಸಿಕ್ಕಿರಲಿಲ್ಲ. ಆರನೇ ಪಾಯಿಂಟ್ ನಲ್ಲಿ ಮಾತ್ರ ಮೂಳೆಗಳು ಪತ್ತೆಯಾಗಿದ್ದವು.

ಆದರೆ ಇಂದು 9 ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಯಲಿದೆ. 9 ನೇ ಪಾಯಿಂಟ್ ನಲ್ಲಿ ಮಹತ್ವದ ಸಾಕ್ಷ್ಯಗಳು ಸಿಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಯಾಕೆಂದರೆ ಅನಾಮಿಕ ದೂರುದಾರ 9 ನೇ ಪಾಯಿಂಟ್ ನಲ್ಲೇ ಆರರಿಂದ ಏಳು ಶವಗಳನ್ನು ಹೂತಿದ್ದೆ ಎಂದು ಹೇಳಿದ್ದ. ಮೊದಲು ಇಲ್ಲಿಂದಲೇ ಶೋಧ ಶುರು ಮಾಡಬಹುದು ಎಂದಿದ್ದ.

ಆದರೆ ಅಧಿಕಾರಿಗಳು ಕ್ರಮ ಸಂಖ್ಯೆ ಪ್ರಕಾರ ಹುಡುಕಾಟ ನಡೆಸುತ್ತಿದ್ದಾರೆ. ಇಂದು 9 ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ನಡೆಯಲಿದೆ. ಹೀಗಾಗಿ ಇಂದು ಮಹತ್ವದ ತಿರುವು ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ