ಪತ್ನಿ ಮಾಡಿದ ಆ ಕೆಲಸದಿಂದ ಪತಿಗೆ ಸಿಕ್ಕಿತು ಡಿವೋರ್ಸ್
ಬುಧವಾರ, 1 ಜುಲೈ 2020 (19:55 IST)
ಪತ್ನಿ ಮಾಡಿದ ಕೆಲಸದಿಂದಾಗಿ ಪತಿಗೆ ಡಿವೋರ್ಸ್ ಸಿಕ್ಕ ಘಟನೆ ನಡೆದಿದೆ.
2012 ರಲ್ಲಿ ಅವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದರೆ ಆರಂಭದಲ್ಲಿ ಬೇರೆ ಮನೆ ಮಾಡು ಅಂತ ಗೃಹಿಣಿ ಕ್ಯಾತೆ ತೆಗೆದಳು.
ಇದರಿಂದಾಗಿ ಒಂದು ವರ್ಷದಲ್ಲೇ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡೋಕೆ ಶುರುಮಾಡಿದರು.
ಆರೇಳು ವರ್ಷದ ನಂತರ ಗಂಡನ ವಿರುದ್ಧ ಪತ್ನಿ ಕೇಸ್ ದಾಖಲು ಮಾಡಿದರೆ, ಪತ್ನಿಯಿಂದ ಡಿವೋರ್ಸ್ ಬೇಕು ಎಂದು ಪತಿ ಕೋರ್ಟ್ ಮೆಟ್ಟಿಲೇರಿದ.
ಸಿಂಧೂರ, ಬಳೆ ಹಾಕುವುದಿಲ್ಲ ಎಂದು ಕೋರ್ಟ್ ನಲ್ಲಿ ಪತ್ನಿ ವಾದ ಮಾಡಿದಳು. ಇದನ್ನು ಪರಿಗಣಿಸಿದ ನ್ಯಾಯಾಲಯ ಪತಿ ಕೇಳಿದಂತೆ ವಿಚ್ಚೇದನ ನೀಡಿದೆ.
ಆಸ್ಸಾಂನಲ್ಲಿ ಈ ಘಟನೆ ನಡೆದಿದೆ. ಸಿಂಧೂರ, ಬಳೆ ಸಂಪ್ರದಾಯದ ಪ್ರತೀಕ. ಅವನ್ನು ತೊಡದಿದ್ದರೆ ವರನನ್ನು ಪತಿಯಾಗಿ ಸ್ವೀಕಾರ ಮಾಡಿಲ್ಲ ಅಂತ ಕೋರ್ಟ್ ಅಭಿಪ್ರಾಯಪಟ್ಟಿದೆ.