ಸ್ಮಾರ್ಟ್ ಫೋನ್ ನಿಂದ ಜನರನ್ನು ದೂರಮಾಡಲು ಲಂಡನ್ ಸಂಸ್ಥೆಯೊಂದು ಮಾಡಿದ್ದೇನು ಗೊತ್ತಾ?

ಶನಿವಾರ, 4 ಮೇ 2019 (07:07 IST)
ಲಂಡನ್ : ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಜನರನ್ನು ದೂರಮಾಡಲು ಲಂಡನ್ ನ ಸಂಸ್ಥೆಯೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ.




ಹೌದು. ಇತ್ತೀಚಿನ ದಿನಗಳಲ್ಲಿ ಜನರು ಸ್ಮಾರ್ಟ್ ಫೋನ್ ಗಳ ದಾಸರಾಗಿದ್ದಾರೆ, ಅವುಗಳ ಅತಿಯಾದ ಬಳಕೆಯಿಂದ ಸಾಮಾಜಿಕ ಚಟುವಟಿಕೆಗಳಿಂದ ಮತ್ತು ಜನಸಂಪರ್ಕದಿಂದ ದೂರವಾಗುತ್ತಿರುವುದಲ್ಲದೇ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. 


ಈ ನಿಟ್ಟಿನಲ್ಲಿ ಸ್ಮಾರ್ಟ್ ಫೋನ್ ನಿಂದ ಜನರನ್ನು ದೂರಮಾಡಲು ಲಂಡನ್ ಸಂಸ್ಥೆಯೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಲಂಡನ್‌ ನ ಕಾನರಿ ವಾರ್ಸ್ ಪ್ರದೇಶದಲ್ಲಿ ಪರಿಸರ ಸ್ನೇಹಿ ಪ್ಯಾಪಿರಸ್ ಕಾಗದದಿಂದ ಸಣ್ಣ ಕಥೆಗಳನ್ನು ಮುದ್ರಿಸಿ ನೀಡುವ ವ್ಯವಸ್ಥೆ ಮಾಡಿದೆ.


ಸಂಪೂರ್ಣ ಉಚಿತವಾಗಿರುವ ಈ ಸೇವೆಯಲ್ಲಿ ಅಪರಾಧ, ಸಿನಿಮಾ, ಕ್ರೀಡೆ ಸೇರಿ ಅನೇಕ ವಿಭಾಗಗಳಲ್ಲಿ ಚಾರ್ಲ್ಸ್ ಡಿಕನ್ಸ್, ವರ್ಜಿನಿಯಾ ವೂಲ್ಫ್ ಸೇರಿ ಅನೇಕ ಖ್ಯಾತನಾಮ ಲೇಖಕರ ಸಾವಿರಾರು ಪುಸ್ತಕಗಳನ್ನು ಜನರು ಓದಬಹುದು. ಅದಕ್ಕಾಗಿ ಇಂತಹ ಮೂರು ಯಂತ್ರಗಳನ್ನು ವಿವಿಧೆಡೆ ಸ್ಥಾಪಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ