ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ-ಡಿಸಿಎಂ ಡಿ.ಕೆ.ಶಿವಕುಮಾರ್

ಶನಿವಾರ, 3 ಜೂನ್ 2023 (15:46 IST)
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ,ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ ?ಓನರ್ ಹೆಸರಿನಲ್ಲಿ ಮೀಟರ್ ಇರಬಹುದು .ಉದಾಹರಣೆಗೆ ನನ್ನ ಮನೆ ನನ್ನ ಹೆಂಡತಿ ಹೆಸರಿನಲ್ಲಿದೆ.ನಾನು ಇಲ್ಲಿ ವಾಸ ಆಗಿದ್ದೇನೆ .ಹಾಗಂತ ೨೦೦ಯೂನಿಟ್ ಒಳಗಡೆ ಇದ್ದರೆ.ನಾನು ಉಚಿತ ತೆಗೆದುಕೊಳ್ಳುವುದು ಬಿಡೋದು ಬೇರೆ ವಿಚಾರ .ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ .ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ನಮ್ಮ ಮಾತು ಖಚಿತ,ಉಚಿತ ಅಂತ ಹೇಳಿದ್ದೇವೆ ಉಚಿತನೇ,೧೫೦ಯೂನಿಟ್ ಬಳಸುತ್ತಿದ್ದವರು ೨೦೦ ಯೂನಿಟ್ ಬಳಸ್ತಾರೆ.ಕರೆಂಟ್ ಏಕಾಏಕಿ ಬಳಸೋದು ಹೆಚ್ಚಳ ಆಗಬಾರದು ,೧೦% ಹೆಚ್ಚಳಕ್ಕೆ ಅವಕಾಶ ಕೊಟ್ಟಿದ್ದೇವೆ .ಗೃಹಜ್ಯೋತಿ, ಗೃಹಲಕ್ಷ್ಮಿ ನೀಡಿರುವುದು ಬೆಲೆ ಏರಿಕೆ ತಗ್ಗಿಸಲು ಯಾರಿಗೂ ಆದಾಯ ಜಾಸ್ತಿ ಆಗಿಲ್ಲ ಬೆಲೆ ಏರಿಕೆ ಆಗಿದೆ‌ಯಾರಿಗೂ ತೊಂದರೆ ಆಗಬಾರದು.ವಿರೋಧ ಪಕ್ಷದವರು ಟೀಕೆ ಮಾಡಲಿ .ಮೊದಲು ಅವರು೧೫ ಲಕ್ಷ ನಮ್ಮ ಅಕೌಂಟ್ಗೆ ಹಾಕಿಸಲಿ.ಕಪ್ಪು ಹಣ ತರಲಿ,ಎರಡು ಕೋಟಿ ಉದ್ಯೋಗ ಕೊಡಲಿ ,ರೈತರ ಆದಾಯ ಡಬಲ್ ಮಾಡಲಿಈಗ ಅವರಿಗೆ ಟೈಮ್ ಇದೆ .ಅವರಿಗೆ ಪರೀಕ್ಷೆ ಬರ್ತಿದೆ.ಆ ಪರೀಕ್ಷೆಯಲ್ಲಿ ಅವರು ಪಾಸ್ ಆಗಲಿದೆ. ನಾವು ಹೇಗೆ ಮಾತು ಉಳಿಸಿಕೊಂಡೆವೋ ಅವರು ಉಳಿಸಿಕೊಳ್ಳಲಿ .ಸಾಕಷ್ಟು ಜನ ಐಎಎಸ್ ಆಫೀಸರ್ ಕೆಎಎಸ್ ಆಫೀಸರ್ ಸರ್ಕಾರಿ ನೌಕರರ ಪತ್ರ ಬರೆದಿದ್ದಾರೆ .ಹಿಂದೆ ಗ್ಯಾಸ್ ವಿಚಾರದಲ್ಲೂ ಕೂಡ ಕೆಲವರು ಸಬ್ಸಿಡಿ ಬೇಡ ಅಂದಿದ್ದರು.ಹಾಗೆ ಪತ್ರ ಬರೆದು ನಮಗೆ ಉಚಿತ ಬೇಡ ಅಂದಿದ್ದಾರೆ.ಮುಂದೆ ಸರ್ಕಾರದಿಂದಲೂ ಏನ್ ಮಾಡಬಹುದು ಅಂತ ನೋಡ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ