ಗುಜರಿ ಪಾಲಾಗುವ ದಾರಿಯಲ್ಲಿ ಡ್ರೆಜ್ಜರ್

ಬುಧವಾರ, 30 ಅಕ್ಟೋಬರ್ 2019 (15:17 IST)
ನವಮಂಗಳೂರು ಬಂದರಿನಲ್ಲಿ ಹೂಳು ತೆಗೆಯಲು ಮುಂಬೈಯಿಂದ ಬಂದಿದ್ದ ಡ್ರೆಜ್ಜರ್ ಹಡಗು ‘ಭಗವತಿ ಪ್ರೇಮ್’ ಗುಜರಿ ಪಾಲಾಗುವ ಸಂಶಯವಿದೆ.

ಮುಂಬೈಯ ಮರ್ಕೆಟರ್ ಸಂಸ್ಥೆಯ ಹಡಗು ಇದಾಗಿದ್ದು, ಕ್ಯಾರ್ ಚಂಡ ಮಾರುತದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಾಗ ಅಪಾಯಕ್ಕೆ ಸಿಲುಕಿತ್ತು. ಅದನ್ನು ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರ ಕಿನಾರೆಯಿಂದ 300 ರಿಂದ 500 ಮೀಟರ್ ದೂರಕ್ಕೆ ರಾತ್ರಿ ತಂದು ನಿಲ್ಲಿಸಲಾಗಿದೆ.

ವಸ್ತುಗಳ ಸಾಗಾಟ: ಅಪಾಯಕ್ಕೆ ಸಿಲುಕಿರುವ ಬಾರ್ಜ್‌ನಲ್ಲಿದ್ದವರನ್ನು ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಟಗ್ ಮೂಲಕ ಸ್ಥಳಾಂತರಿಸಲಾಗಿದ್ದು, ಇದಕ್ಕೆ ಮೊದಲು ಬಾರ್ಜ್‌ನಲ್ಲಿ ಉರಿಯುತ್ತಿದ್ದ ದೀಪಗಳನ್ನು ನಂದಿಸಲಾಗಿದೆ. ಅದರಲ್ಲಿದ್ದ ವಸ್ತುಗಳನ್ನು ಇನ್ನೊಂದು ಬಾರ್ಜ್‌ನಲ್ಲಿ ಕೊಂಡೊಯ್ಯಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಡ್ರೆಜ್ಜರ್ ಮರಳಿನಲ್ಲಿ ಸಾಕಷ್ಟು ಹೂತು ಹೋಗಿರುವ ಸಾಧ್ಯತೆಯಿದೆ. ಇದನ್ನು ಪುನಃ ದುರಸ್ತಿಗೊಳಿಸಿ ಸಮುದ್ರಕ್ಕೆ ಮರಳಿ ಎಳೆಯುವುದು ವೆಚ್ಚದಾಯಕ ಹಾಗೂ ಕಷ್ಟಕರ. ಹಾಗಾಗಿ ಇದನ್ನು ಈ ಭಾಗದಲ್ಲಿಯೇ ಸ್ಕ್ರಾಪ್ ಮಾಡುವ ಸಾಧ್ಯತೆ ನಿಚ್ಚಳವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ಮೀನುಗಾರರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ