ಡ್ರಗ್ ಪೆಡ್ಲರ್ ವಿಕಾಸ್ ಮೋದಿಯವರ 'ವಿಕಸಿತ ಭಾರತ'ದ ಕೊಡುಗೆಯೇ: ಕಾಂಗ್ರೆಸ್ ಪ್ರಶ್ನೆ

Sampriya

ಬುಧವಾರ, 24 ಜುಲೈ 2024 (19:13 IST)
Photo Courtesy X
ಬೆಂಗಳೂರು: ಗುಜರಾತಿನಲ್ಲಿ ಬಿಜೆಪಿ ಮುಖಂಡ ವಿಕಾಸ್ ಅಹಿರ್ ಡ್ರಗ್ ದಂಧೆ ನಡೆಸಿ ಸಿಕ್ಕಿಬಿದ್ದಿದ್ದಾನೆ, ದೇಶದೊಳಗೆ ಅತಿ ಹೆಚ್ಚು ಡ್ರಗ್ಸ್ ನುಸುಳುವುದು ಗುಜರಾತಿನ ಬಂದರುಗಳಿಂದಲೇ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದೆ.

ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ವಿಕಾಸ್ ಅಹಿರ್ ಎಂದು ಗುರುತಿಸಲಾಗಿದ್ದು, ಆತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘವಿ, ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಹಲವಾರು ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಇದೀಗ ಬಿಜೆಪಿ ನಾಯಕರ ಜತೆಗೆ ವಿಕಾಸ್ ನಿಂತಿರುವ ಫೋಟೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯನ್ನು ಲೇವಡಿ ಮಾಡಿದೆ.

ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ ಡ್ರಗ್‌ ಪ್ಲೆಡರ್, ಆರೋಪಿ ವಿಕಾಸ್ ಅಹಿರ್ ಬಂಧನದ ನಂತರ ಗುಜರಾತ್ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿ ನಡೆಯುತ್ತಿದೆ. ಆತ ಬಿಜೆಪಿಯ ಮುಂಚೂಣಿ ಕಾರ್ಯಕರ್ತ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಗುಜರಾತಿನಲ್ಲಿ ಬಿಜೆಪಿ ಮುಖಂಡ ವಿಕಾಸ್ ಅಹಿರ್ ಡ್ರಗ್ ದಂಧೆ ನಡೆಸಿ ಸಿಕ್ಕಿಬಿದ್ದಿದ್ದಾನೆ, ದೇಶದೊಳಗೆ ಅತಿ ಹೆಚ್ಚು ಡ್ರಗ್ಸ್ ನುಸುಳುವುದು ಗುಜರಾತಿನ ಬಂದರುಗಳಿಂದಲೇ.

ಈ ಡ್ರಗ್ ಪೆಡ್ಲರ್ ವಿಕಾಸ್ ಮೋದಿಯವರ 'ವಿಕಸಿತ ಭಾರತ'ದ ಕೊಡುಗೆಯೇ ಬಿಜೆಪಿ ಕರ್ನಾಟಕ

ಗುಜರಾತಿನ ಬಹುತೇಕ ಸಚಿವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಈತ ಯೋಗಿ ಆದಿತ್ಯನಾಥ್ ರ ಹಿಂದೂ ಯುವವಾಹಿನಿ ಎಂಬ ಸಂಘಟನೆಯ ಗುಜರಾತ್ ಘಟಕದ ಅಧ್ಯಕ್ಷನಂತೆ, ಬಹುಶಃ ಯುವ ಸಮುದಾಯವನ್ನು ಮಾದಕವಸ್ತುಗಳ ದಾಸರನ್ನಾಗಿಸುವುದೇ ಬಿಜೆಪಿ ಹಾಗೂ ಯೋಗಿಯ ಧರ್ಮ ರಕ್ಷಣೆಯ ಕೈಂಕರ್ಯ ಇರಬಹುದೇನೋ!?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ