ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಮಾಡುತ್ತಿದ್ದೇವೆ- ಸಂಸದ ಪ್ರತಾಪ್ ಸಿಂಹ
ಬುಧವಾರ, 9 ಸೆಪ್ಟಂಬರ್ 2020 (13:05 IST)
ಮಡಿಕೇರಿ : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಮಾಡುತ್ತಿದ್ದೇವೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ಕಾಂಗ್ರೆಸ್ , ಜೆಡಿಎಸ್, ಬಿಜೆಪಿ ಪರ ರಾಗಿಣಿ ಪ್ರಚಾರ ಮಾಡಿದ್ದಾರೆ. ನಟ ನಟಿಯರು ಎಲ್ಲಾ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ಡ್ರಗ್ಸ್ ವಿರುದ್ಧ ಬಿಜೆಪಿ ಹೋರಾಟ ಇದ್ದೇ ಇದೆ. ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.